ಕಾರವಾರ ಸೆ.25 : ಮಾಜಿ ವಿಧಾನ ಪರಿಷತ್ ಸದಸ್ಯೆ ಶುಭಲತಾ ಅಸ್ನೋಟಿಕರ್ ಅನಾರೋಗ್ಯದಿಂದ
ಕಾರವಾರದ ಅವರ ನಿವಾಸದಲ್ಲಿ ಇಂದು ಮೃತಪಟ್ಟಿದ್ದಾರೆ.
ಮಾಜಿ ಸಚಿವ ಆನಂದ್ ಅಸ್ನೋಟಿಕರ್ ತಾಯಿ ಶುಭಲತಾ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಶುಭಲತಾ ಅವರು ಹಲವು ತಿಂಗಳಿಂದ ಚಿಕಿತ್ಸೆ ಪಡೆಯುತಿದ್ದರು.
ಪತಿ ವಂಸತ್ ಅಸ್ನೋಟಿಕರ್ ಹತ್ಯೆಯಾದ ನಂತರ ವಿಧಾನ ಪರಿಷತ್ ಸದಸ್ಯರಾಗಿದ್ದರು.
ನಾಳೆ ಮೃತರ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಗಳಿವೆ.