ಕರಾವಳಿ, ಮಲೆನಾಡು ಸೇರಿ ಉತ್ತರ ಒಳನಾಡಿನಲ್ಲಿ ಹಗುರ ಮಳೆ

ಬೆಂಗಳೂರು: ನೈರುತ್ಯ ಮುಂಗಾರು ಕರಾವಳಿ ಕರ್ನಾಟಕದಲ್ಲಿ ಸಾಮಾನ್ಯವಾಗಿದ್ದರೆ, ಒಳನಾಡಿನಲ್ಲಿ ದುರ್ಬಲಗೊಂಡಿದೆ. ಈ ದಿನ ಬುಧವಾರ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ಉತ್ತರ ಒಳನಾಡಿನ ಬೆಳಗಾವಿ, ವಿಜಯಪುರ, ಕಲಬುರಗಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗಲಿದೆ. ಉಳಿದಂತೆ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಮುಖ್ಯವಾಗಿ ಶುಷ್ಕ ಹವಾಮಾನ ಇರಲಿದೆ.

ಇನ್ನು ಬೆಂಗಳೂರು ನಗರ ಸುತ್ತಮುತ್ತ ಮುಂದಿನ 24 ಗಂಟೆಯಲ್ಲಿ ಭಾಗಶಃ ಮೋಡ ಕವಿದ ಆಕಾಶ ಇರಲಿದೆ. ಒಣ ಹವಾಮಾನ ಮುಂದುವರಿಯಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 31 ಮತ್ತು 20 ಡಿ.ಸೆ ಇರಲಿದೆ.

ಇಲ್ಲೆಲ್ಲ ಮಳೆ?

ಪುತ್ತೂರು ಎಚ್‌ಎಂಎಸ್, ಕೋಟ, ಹಣಂಬೂರು ವೀಕ್ಷಣಾಲಯ, ಗೋಕರ್ಣ, ಅಂಕೋಲಾ, ಕಾರ್ಕಳದಲ್ಲಿ ತಲಾ 3 ಸೆಂ.ಮೀ ಮಳೆಯಾಗಲಿದೆ. ಕಾರವಾರ ವೀಕ್ಷಣಾಲಯ, ಮಂಕಿ, ಮಂಗಳೂರು ಎಪಿ ಅನ್ಸರ್ವೇಟರಿ, ಗೇರ್ಸೊಪ್ಪ, ಕುಮಟಾ, ಉಡುಪಿ, ಶಿರಾಲಿ ಪಿಟಿಒ, ಲಿಂಗನಮಕ್ಕಿ ಎಚ್‌ಎಂಎಸ್, ಶೃಂಗೇರಿ ಎಚ್‌ಎಂಎಸ್ 2 ಸೆಂ.ಮೀ ಮಳೆಯಾಗಿದೆ. ಸಿದ್ದಾಪುರ, ಸುಳ್ಯ, ಮೂಲ್ಕಿ , ಕುಂದಾಪುರ, ಧಾರವಾಡ ಪಿಟಿಒ, ಶಿರಹಟ್ಟಿ , ಧಾರವಾಡ, ನರಗುಂದ, ಭಾಗಮಂಡಲ, ಕಮ್ಮರಡಿ ಸೇರಿ ಕೊಟ್ಟಿಗೆಹಾರ, ಜಯಪುರ, ಪೊನ್ನಂಪೇಟೆಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.