ಸಮಯಕ್ಕೆ ಸರಿಯಾದ ಬಾರದ ಬಸ್‌- ಹೊನ್ನಾವರ ಬಸ್‌ ನಿಲ್ದಾಣದಲ್ಲಿ ಬಸ್‌ ತಡೆದ ಕಾಲೇಜು ವಿದ್ಯಾರ್ಥಿನಿಯರು

ಹೊನ್ನಾವರ ಸೆ.17 : ಸರಿಯಾದ ಸಮಯಕ್ಕೆ ಬಸ್‌ ಬಿಡುವಂತೆ ಆಗ್ರಹಿಸಿ ವಿವಿಧ ಕಾಲೇಜು ವಿದ್ಯಾರ್ಥಿನಿಯರು ಹೊನ್ನಾವರ ಬಸ್‌ ನಿಲ್ದಾಣದಲ್ಲಿ ಬಸ್‌ ತಡೆದು ಆಕ್ರೋಶ ಹೊರಹಾಕಿದ ಘಟನೆ ನಡೆದಿದೆ…

ತಾಲೂಕಿನ ನಗರಬಸ್ತಿಕೇರಿಗೆ ಹೋಗುವ ಬಸ್‌ ಸರಿಯಾದ ಸಮಯಕ್ಕೆ ಬಾರದ ಕಾರಣದಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಸಾರಿಗೆ ಸಿಬ್ಬಂದಿ ವಿರುದ್ಧ ಬಸ್‌ ತಡೆದು ಪ್ರತಿಭಟನೆ ನಡೆಸಿದ್ರು. ಪ್ರತಿದಿನ ಮಧ್ಯಾಹ್ನ 1.30ಕ್ಕೆ ಬರತ್ತಿದ್ದ ಬಸ್‌ ಇಂದು 3 ಗಂಟೆಗೆ ಬಂದಿದೆ. ಒಂದೂವರೆ ಗಂಟೆ ತಡವಾಗಿ ಬಂದಿದೆ. ಇದ್ರಿಂದ ಆಕ್ರೋಶಗೊಂಡ ಕಾಲೇಜು ವಿದ್ಯಾರ್ಥಿಗಳು ಹೊನ್ನಾವರ ಬಸ್‌ ನಿಲ್ದಾಣದಲ್ಲಿ ಬೇರೆ ಬಸ್‌ಗಳನ್ನು ಅಡ್ಡಗಟ್ಟಿ ಪ್ರತಿಭಟೆನ ನಡೆಸಿದ್ರು..

ಇನ್ನೂ ಪ್ರತಿದಿನವೂ ಕೂಡ ಇದೇ ರೀತಿ ಸಮಸ್ಯೆಯಾಗುತ್ತಿದೆ. ಇವತ್ತು ಗಾಡಿ ಪಂಚರ್‌ ಆಗಿತ್ತು ಅಂತಾ ಕಾರಣ ಹೇಳುತ್ತಾರೆ. ಆದ್ರೆ ಪ್ರತಿದಿನ ತಡವಾಗಿ ಬರ್ತಾರೆ. ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಬಸ್‌ ಇಳಿದ ನಂತರ ನಾಲ್ಕೈದು ಕಿ.ಮೀ ನಡೆದುಕೊಂಡು ಹೋಗಬೇಕು. ನಿಮಗೆ ಬೇಕಾದಾಗ ಬಸ್‌ ಬಿಟ್ಟರೇ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು..

ಇನ್ನೂ ಈ ವೇಳೆ ನುಡಿಸಿರಿಯೊಂದಿಗೆ ಮಾತನಾಡಿದ ಸಾರಿಗೆ ಸಿಬ್ಬಂದಿ, ಜನರಿಗೆ ತೊಂದರೆ ಕೊಡುವುದು ನಮ್ಮ ಉದ್ದೇಶವಲ್ಲ. ಗಾಡಿ ಸ್ವಲ್ಪ ತಾಂತ್ರಿಕ ದೋಷದಿಂದ ತಡವಾಗಿ ಬಂದಿದೆ. ಕೆಲವೊಂದ ಸಾರಿ ತಡವಾಗುತ್ತದೆ. ಆದ್ರೆ ಜನರು ಸಹಕಾರ ನೀಡಬೇಕು. ಹಳ್ಳಿಯಿಂದ ಬರುವಾಗ ಕೆಲವೊಂದಿಷ್ಟು ಸಮಸ್ಯಗಳಿರುತ್ತೆ. ರೋಡ್‌, ಟ್ರಾಫಿಕ್‌ ಹೀಗೆ ಅನೇಕ ಸಮಸ್ಯಗಳಿರುತ್ತವೆ. ಹಾಗಾಗಿ ಕೆಲವೊಂದ ಸಾರಿ ತಡವಾಗಿರುತ್ತದೆ ಎಂದು ಹೇಳಿದ್ರು..

ಇನ್ನೂ ಪ್ರಯಾಣಿಕರೊಬ್ಬರು ಮಾತನಾಡಿ, ಪ್ರತಿದಿನವೂ ಕೂಡ ಇದೇ ಸಮಸ್ಯೆಯಿದ್ದು, ಶಾಲಾ-ಕಾಲೇಜು ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ. ಹೀಗಾಗಿ ಕೂಡಲೇ ಸೂಕ್ತ ಬಸ್‌ ಸೌಲಭ್ಯ ನೀಡುವಂತೆ ಆಗ್ರಹಿದ್ರು. ಇನ್ನಾದ್ರೂ ಸಾರಿಗೆ ಇಲಾಖೆ ಗ್ರಾಮೀಣ ಭಾಗಕ್ಕೆ ಸರಿಯಾದ ಸಮಯಕ್ಕೆ ಬಸ್‌ ಬಿಟ್ಟು ಜನರಿಗೆ ಅನುಕೂಲ ಮಾಡಿಕೊಡುತ್ತಾ ಅನ್ನೋದನ್ನು ಕಾದು ನೋಡಬೇಕಿದೆ..