ಕಾರವಾರ : ನಗರದ ಬಿಣಗಾ ಮೂಡಲಮಕ್ಕಿ ವಾರ್ಡ ಭೂತನಂಬರ 113 ರಲ್ಲಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಇಂದು ಮಧ್ಯಾನ್ಹ ಸಭೆ ಸೇರಿ ಜನರಿಗೆ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನದ ಕುರಿತು ಸಂಪೂರ್ಣ ಮಾಹಿತಿ ನೀಡಿ.ಮನೆ ಮನೆಗಳಿಗೆ ತೆರಳಿ ಬಿಜೆಪಿ ಸದಸ್ಯತ್ವ ನೋಂದಣಿ ಮಾಡಿ.ಸದಸ್ಯತ್ವ ನೋಂದಣಿ ಮಾಡಿದ ಮನೆಗೆ ಬಿಜೆಪಿ ಸದಸ್ಯತ್ವ ನೋಂದಣಿ ಸ್ಟೀಕರ್ ಹಚ್ಚಲಾಯಿತು.
ಕಾರವಾರ ನಗರ ಓಬಿಸಿ ಮೋರ್ಚಾ ಅಧ್ಯಕ್ಷರು ಕಾರವಾರ ನಗರಸಭೆ ಅಧ್ಯಕ್ಷರಾದ ರವಿರಾಜ ಅಂಕೋಲೆಕರ ಸದಸ್ಯತ್ವ ನೋಂದಣಿ ಕುರಿತು ಮಾತನಾಡಿ ತಾವೆಲ್ಲರೂ ಬಿಜೆಪಿ ಸದಸ್ಯರಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿರವರ ಕೈ ಬಲಪಡಿಸಬೇಕೆಂದು ಕರೆ ನೀಡಿದರು.
ನಗರ ಮಂಡಲ ಬಿಜೆಪಿ ಅಧ್ಯಕ್ಷರಾದ ನಾಗೇಶ ಕುರ್ಡೆಕರರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಮ್ಮ ಜಿಲ್ಲೆಗೆ ನಾಲ್ಕು ಲಕ್ಷ ಸದಸ್ಯತ್ವ ನೋಂದಣಿ ಗುರಿ ಇದೆ ಆ ಗುರಿ ತಲುಪಲು ನೀವು ನಮ್ಮೊಂದಿಗೆ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಬೇಕಂದು ಕರೆ ನೀಡಿದರು.
ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ ರಾಜೇಂದ್ರ ನಾಯ್ಕ ಮಾತನಾಡಿ ದೇಶ ಧರ್ಮದ ರಕ್ಷಣೆ ಬಿಜೆಪಿಯಿಂದ ಮಾತ್ರ ಸಾಧ್ಯ. ನರೇಂದ್ರ ಮೋದಿಜಿ ಪ್ರಧಾನಮಂತ್ರಿಗಳಾಗಿ ಹತ್ತು ವರ್ಷದ ಆಡಳಿತದ ಅವಧಿಯಲ್ಲಿ ಹಿಂದಿನ 65 ವರ್ಷಗಳಲ್ಲಿ ಯಾವುದೆ ಸರ್ಕಾರ ಮಾಡದ ಅಭಿವೃದ್ಧಿ ಕೆಲಸ. ಕೆವಲ ಹತ್ತು ವರ್ಷಗಳಲ್ಲಿ ಮಾಡಿ ತೋರಿಸಿದ್ದಾರೆ. ನಮ್ಮ ಮುಂದಿನ ಪೀಳಿಗೆಗೊಸ್ಕರ ಈ ದೇಶದಲ್ಲಿ ಬಿಜೆಪಿ ಬಲಿಷ್ಠಗೊಳಿಸಲು ಭೂತನಲ್ಲಿ ಕನಿಷ್ಠ 300 ಹಾಗೂ ಓಬ್ಬ ಪದಾಧಿಕಾರಿ ವಯಕ್ತಿಕವಾಗಿ ನೂರು ಬಿಜೆಪಿ ಸದಸ್ಯರಾಗಿ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ನಗರ ಪ್ರಧಾನ ಕಾರ್ಯದರ್ಶಿ ಅಶೋಕ ಗೌಡ ಕಾರವಾರ, ನಗರಸಭೆ ಸದಸ್ಯರಾದ ಮನೋಜ ಬಾಂದೇಕರ, ಹನುಮಂತ ತಳವಾರ, ರುಕ್ಮೀಣಿ ಗೌಡ ಹಾಗೂ ಪ್ರಮುಖರಾದ ಶಾಂತಿ ಹರಿಕಾಂತ, ಗೋಕುಲ್ ನಾಯ್ಕ, ನಯನಾ ಮಾಳಸೇಕರ, ಆರ್.ಡಿ.ನಾಯ್ಕ, ಜಯರಾಮ ಮಾಳಸೇಕರ ಮತ್ತು ಓಬಿಸಿ ಮೋರ್ಚಾ ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು