ಬೆಂಗಳೂರಿನಲ್ಲಿ ಗರ್ಲ್‌ ಫ್ರೆಂಡ್‌ ನೋಡಲು ಬಂದು ಸಿಕ್ಕಿಬಿದ್ದ ಹರಿಯಾಣದ ನಕ್ಸಲ್‌

ಬೆಂಗಳೂರು: ಬೆಂಗಳೂರಲ್ಲಿ ಗರ್ಲ್‌ ಫ್ರೆಂಡ್‌ ನೋಡಲು ಬಂದು ನಕ್ಸಲ್‌ವೊಬ್ಬ ಅಂದರ್ ಆಗಿದ್ದಾನೆ. ಅನಿರುದ್ಧ್‌ ಬಂಧಿತ ನಕ್ಸಲ್ ಆಗಿದ್ದಾನೆ. ಹರಿಯಾಣ ಮೂಲದ ಅನಿರುದ್ದ್ ಸಿಪಿಐ ಮಾವೋವಾದಿಗಳ‌ ಪರವಾಗಿ ಕೆಲಸ ಮಾಡುತ್ತಿದ್ದ. ಸಿಸಿಬಿಯ ಎಟಿಸಿಯಿಂದ ಈತನನ್ನು ಬಂಧಿಸಲಾಗಿದೆ.

ಅನಿರುದ್ಧ್‌ ನಿಷೇಧಿತ ಬರಹಗಳನ್ನು ಸರ್ಕ್ಯೂಲೇಟ್ ಮಾಡುತ್ತಿದ್ದ. ಇದುವರೆಗೂ ಯಾವ ಪೊಲೀಸರಿಗೂ ಸಿಕ್ಕಿಬಿದ್ದಿರಲಿಲ್ಲ. ಈಗ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದ ನಕ್ಸಲ್‌ನನ್ನು ಬೆಂಗಳೂರು ಸಿಸಿಬಿ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ನಿಷೇಧಿತ ನಕ್ಸಲ್ ಸಂಘಟನೆಯಾಗಿರುವ CPI(M)ನಲ್ಲಿ ಅನಿರುದ್ಧ್‌ ತನ್ನನ್ನು ತೊಡಗಿಸಿಕೊಂಡಿದ್ದ. ನಿಷೇಧಿತ ಸಂಘಟನೆ ಪರ ಕೆಲಸ ಮಾಡುತ್ತಿದ್ದ. ಹಣ ಸಂಗ್ರಹ, ಗುಪ್ತ ಸಭೆಗಳನ್ನು ನಡೆಸುತ್ತಿದ್ದ. ತನ್ನ ಗೆಳತಿ ನೋಡಲು ಮೂರ್ನಾಲ್ಕು ದಿನದ ಹಿಂದೆ ಬೆಂಗಳೂರಿಗೆ ಬಂದಿದ್ದ.

ವಿಕಾಸ್ ಘಾಡ್ಗೆ ಎಂಬ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಿಕೊಂಡಿದ್ದ. ಸದ್ಯ ಬಂಧಿತನಿಂದ ಎರಡು ಬ್ಯಾಗ್‌ಗಳು, ಪೆನ್ ಡ್ರೈವ್‌ಗಳು, ಟ್ಯಾಬ್ ವಶಕ್ಕೆ ಪಡೆಯಲಾಗಿದೆ. ನಿನ್ನೆ ಗುರುವಾರ ಬೆಳಗ್ಗೆ 8 ಗಂಟೆಗೆ ಚೆನ್ನೈಗೆ ಹೋಗಲು ಕೆಎಸ್ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದ.

ಈ ವೇಳೆ ಆತನ ಮೇಲೆ ನಿಗಾ ಇಟ್ಟಿದ್ದ ಎಟಿಸಿ ಟೀಂ ಅನಿರುದ್ದ ಬಂಧಿಸಿ UAPA ಕಾಯ್ದೆಯಡಿ ಕೇಸ್ ದಾಖಲಿಸಿಕೊಂಡಿದೆ. ಸದ್ಯ ಆರೋಪಿಯನ್ನು ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.