ಭಾರಿ ಮಳೆಗೆ ರಾಯಚೂರಲ್ಲಿ 100ಕ್ಕೂ ಹೆಚ್ಚು ಮನೆಗಳು ಕುಸಿತ; ಕೊಡಗಿನಲ್ಲಿ ಕೂದಲೆಳೆ ಅಂತರದಲ್ಲಿ ಕುಟುಂಬ ಪಾರು

ರಾಯಚೂರು/ಯಾದಗಿರಿ: ರಾಯಚೂರಿನಲ್ಲಿ ಭಾರಿ ಮಳೆಗೆ ಜಿಲ್ಲೆಯಾದ್ಯಂತ 108 ಮನೆಗಳು ಕುಸಿದಿವೆ. ದೇವದುರ್ಗ ತಾಲೂಕಿನಲ್ಲಿ 9 ಮನೆಗಳು ಕುಸಿದು ಬಿದ್ದರೆ, ಲಿಂಗಸೂಗೂರಿನಲ್ಲಿ 32 ಮನೆಗಳು ಹಾಳಾಗಿವೆ. ರಾಯಚೂರು ತಾಲೂಕಿನ ವಿವಿಧೆಡೆ 19 ಮನೆಗಳು ಕುಸಿದಿದೆ. ಆಂಧ್ರ- ತೆಲಂಗಾಣ ಗಡಿ ಹೊಂದಿರುವ ಸಿಂಧನೂರು ತಾಲೂಕಿನ 33 ಮನೆಗಳು, ಮಸ್ಕಿ ತಾಲೂಕಿನಲ್ಲಿ 9, ಸಿರವಾರ ತಾಲೂಕಿನಲ್ಲಿ 4 ಮನೆಗಳು ಕುಸಿದು ಬಿದ್ದಿದೆ. ರಾಯಚೂರು ತಾಲೂಕಿನ ಬಿ.ಯದ್ಲಾಪುರ ಗ್ರಾಮದ ದಿವಾಕರ್ ಎಂಬುವರ ಮನೆ ಕುಸಿದಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಆರು ಜನರು ವಾಸವಾಗಿರುವ ಮನೆ ಸಂಪೂರ್ಣ ಕುಸಿತವಾಗಿ ಹಾಳಾಗಿದೆ. ಸುಮಾರು 40 ವರ್ಷದ ಮಣ್ಣಿನ ಮನೆಯು ಕುಸಿದು ಬಿದ್ದಿದೆ.