ರಸ್ತೆಯಲ್ಲಿ ನಿರ್ಮಾಣವಾದ ಬೃಹತ್ ಗಾತ್ರದ ಹೊಂಡ.!

ಭಟ್ಕಳ: ನಿರಂತರ ಮಳೆಯಿಂದಾಗಿ ತಾಲ್ಲೂಕಿನ ಕಟಗಾರಕೊಪ್ಪದ  ಹೊಸ್ಮಕ್ಕಿಗೆ  ಹೋಗುವ ರಸ್ತೆಯ ನಡುವೆ ಸುಮಾರು 60 ಅಡಿ ಆಳದ ಬೃಹತ್ ಗಾತ್ರದ ಬಾವಿ ನಿರ್ಮಾಣವಾಗಿದೆ.

ಹೊಸ್ಮಕ್ಕಿಯ ಮಣ್ಣಿನ ರಸ್ತೆಯಲ್ಲಿ ಕಳೆದ 3 ದಿನಗಳ ಹಿಂದೆ ಸಣ್ಣ ಹೊಂಡ ಬಿದ್ದಿತ್ತು. ಕ್ರಮೇಣ ಬೃಹತ್ ಗಾತ್ರದ ಹೊಂಡವಾಗಿದ್ದು, ಸುಮಾರು 15 ಅಡಿ ಅಗಲವಿದೆ. ಕೆಳಭಾಗದಿಂದ ನೀರಿನ ಜುಳು ಜುಳು ಶಬ್ದ ಕೇಳಿ ಬರುತ್ತಿರುವುದರಿಂದ ಕೌತುಕ ಉಂಟಾಗಿದೆ.

ಈ ಬಾರಿಯ ಮಳೆಗೆ ರಸ್ತೆಯಲ್ಲಿ ಬೃಹತ್ ಗಾತ್ರದ ಬಾವಿ ತನ್ನಷ್ಟಕ್ಕೆ ನಿರ್ಮಾಣವಾಗಿರುವುದು ಸುತ್ತಮುತ್ತಲಿನ ಜನರೆಲ್ಲರೂ ಅಚ್ಚರಿ ಆತಂಕ ತಂದಿದೆ. ರಸ್ತೆ ಮಧ್ಯದಲ್ಲೇ ಬಾವಿ ನಿರ್ಮಾಣವಾಗಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.