ಕಾರವಾರ: ಮೀನು ಹಿಡಿಯಲು ಹೋಗಿ ನದಿಯಲ್ಲಿ ಮುಳುಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಉತ್ತರಕನ್ನಡದ ಕುಮಟಾದ ತಂಡ್ರಕುಳಿ ಬಳಿ ಅಘನಾಶಿನಿ ನದಿಯಲ್ಲಿ ಘಟನೆ ನಡೆದಿದೆ. ಮಣಿಕಂಠ ಅಂಬಿಗ (21) ಮೃತ ದುರ್ದೈವಿ.
ಕೋಡ್ಕಣಿ ಸಮೀಪ ಐಗಳಕುರ್ವೆ ಬಳಿ ಅಘನಾಶಿನಿ ನದಿಯಲ್ಲಿ ಶವ ಕಂಡ ಮೀನುಗಾರರು ದಡಕ್ಕೆ ಎಳೆದು ತಂದಿದ್ದಾರೆ. ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.