ದಾವಣಗೆರೆ: ಭಾರಿ ಮಳೆಗೆ ಕೊಚ್ಚಿ ಹೋದ 25 ಸಾವಿರ ಮೌಲ್ಯದ ಟೊಮೇಟೊ

ದಾವಣಗೆರೆ, ಆಗಸ್ಟ್​.21: ಜಿಲ್ಲೆಯಲ್ಲಿ‌ ಮಳೆ ಅಬ್ಬರ ಜೋರಾಗಿದೆ. ಚನ್ನಗಿರಿ ತಾಲೂಕಿನ ಬಿಲ್ಲಳ್ಳಿಯಲ್ಲಿ‌ತಡ ರಾತ್ರಿ ಕೆಲ ಮನೆಗಳಿಗೆ ಮಳೆ ನೀರು ನುಗ್ಗಿ ಗ್ರಾಮಸ್ಥರು ಪರದಾಡುವಂತಾಗಿತ್ತು. ನಿರಂತರವಾಗಿ ಒಂದು ಗಂಟೆಗಳ‌ ಕಾಲ‌ ಸುರಿದ ಮಳೆಗೆ ಗ್ರಾಮದ ಗದ್ದೆ ಹಾಗೂ ಮನೆಗಳು ಜಲಾವೃತವಾಗಿದ್ದು ಮನೆಯಿಂದ ನೀರು ಹೊರ ಹಾಕಲು‌ ಗ್ರಾಮಸ್ಥರು ಪರದಾಡಿದ್ರು. ಇನ್ನು ಮತ್ತೊಂದೆಡೆ ಭಾರಿ ಮಳೆಗೆ ಟೊಮೇಟೊಗಳು ಕೊಚ್ಚಿಕೊಂಡು ಹೋಗಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ದಿಢೀರನೆ ಸುರಿದ ಭಾರಿ ಮಳೆಗೆ ಟೊಮೇಟೊ ಹಣ್ಣುಗಳು ಕೊಚ್ಚಿಕೊಂಡು ಹೋಗಿವೆ. ಆರುಂಡಿ ಗ್ರಾಮದ ಜವಳಿ ಸುರೇಶ್ ಎಂಬುವರಿಗೆ ಸೇರಿದ ಟೊಮೇಟೊಗಳು ನೀರುಪಾಲಾಗಿದ್ದು ರೈತನಿಗೆ ಸುಮಾರು 25 ಸಾವಿರಕ್ಕೂ ಹೆಚ್ಚು ನಷ್ಟುವಾಗಿದೆ. ಇನ್ನು ಈ ದೃಶ್ಯವನ್ನು ಕೆಲ ಸ್ಥಳೀಯರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ಜಮೀನಿನಲ್ಲಿ ಟೊಮೇಟೊ ಬಾಕ್ಸ್​ಗೆ ತುಂಬುತ್ತಿದ್ದಾಗ ಭಾರಿ ಮಳೆಯಾಗಿದ್ದು. ಏಕಾಏಕಿ ಒಂದು ಘಂಟೆಗೂ ಹೆಚ್ಚು ಕಾಲ ಮಳೆ ಬಂದಿದೆ. ಇದರಿಂದ ಬಾಕ್ಸ್ ಗೆ ತುಂಬಲು ರಾಶಿ ಹಾಕಿದ್ದ ಟೊಮೇಟೊ ನೀರು ಪಾಲಾಗಿದೆ.