Raksha Bandhan 2024: ಸಹೋದರನಿಗೆ ಈ ಬಣ್ಣದ ರಾಖಿ ಕಟ್ಟಿ, ಇದರಲ್ಲಿದೆ ಆರೋಗ್ಯ ಪ್ರಯೋಜನ

ಪ್ರಾಚೀನ ಕಾಲದಿಂದಲೂ ಹಿಂದೂ ಧರ್ಮದಲ್ಲಿ ಶ್ರಾವಣ ಮಾಸದ ಹುಣ್ಣಿಮೆಯಂದು, ಸಹೋದರಿಯು ತನ್ನ ಅಣ್ಣನ ರಕ್ಷಣೆಗೆ ದಾರವನ್ನು ಕಟ್ಟುತ್ತಾಳೆ. ಇದಕ್ಕೆ ಬಹಳ ಮಹತ್ವವನ್ನು ನೀಡಲಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ವಿವಿಧ ಬಣ್ಣ, ವಿನ್ಯಾಸದ ರಾಖಿಗಳನ್ನು ಕಟ್ಟಲಾಗುತ್ತದೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಜೊತೆಗೆ ಶಾಸ್ತ್ರದ ಅನುಸಾರವಾಗಿಯೂ ಇದು ತಪ್ಪು.

ರೇಷ್ಮೆ ದಾರದಿಂದ ತಯಾರಿಸುವ ರಾಖಿಗಳನ್ನು ಸಹೋದರನಿಗೆ ಕಟ್ಟಬೇಕು ಎಂದು ಹೇಳಲಾಗುತ್ತದೆ. ಆದರೆ ಇದನ್ನು ಯಾರು ಈಗ ಅನುಸರಿಸುವುದಿಲ್ಲ. ಅದರಲ್ಲಿಯೂ ಚಿಕ್ಕ ಮಕ್ಕಳಿಗೆ ರಾಖಿ ಕಟ್ಟುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಏಕೆಂದರೆ ಮಕ್ಕಳು ಅದನ್ನು ಬಾಯಿಗೆ ಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಚಿಕ್ಕ ಮಕ್ಕಳಿಗೆ ಮನೆಯಲ್ಲಿಯೇ ಬಟ್ಟೆಗಳಿಂದ ರಾಖಿಯನ್ನು ತಯಾರಿಸಿ.

ಸಹೋದರಿಯರು ತಮ್ಮ ಸಹೋದರರಿಗೆ ದುಬಾರಿ ಮತ್ತು ಸುಂದರವಾದ ರಾಖಿಯನ್ನು ಖರೀದಿಸಲು ಪ್ರಯತ್ನಿಸುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಕಪ್ಪು ಬಣ್ಣದ ರಾಖಿಯನ್ನು ಕಟ್ಟಬೇಡಿ ಇದು ನಕಾರಾತ್ಮಕತೆಯ ಸಂಕೇತವಾಗಿದೆ. ಅದರಲ್ಲಿಯೂ ಸಹೋದರನ ಮಣಿಕಟ್ಟಿನ ಮೇಲೆ ಕಪ್ಪು ದಾರವನ್ನು ಕಟ್ಟಬಾರದು ಎಂದು ಹೇಳಲಾಗುತ್ತದೆ.

ರಾಖಿಯ ಸುಂದರವಾಗಿದೆ ಎನ್ನುವ ಕಾರಣಕ್ಕೆ ಖರೀದಿ ಮಾಡಬಾರದು. ಹಸಿರು ಅಥವಾ ತಿಳಿ ಕೆಂಪು ಬಣ್ಣದ ರಾಖಿಯನ್ನು ಕಟ್ಟುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಬಣ್ಣವು ಅವರ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಜೀವನದಲ್ಲಿ ಸ್ಥಿರತೆಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.

ಹಳದಿ ಬಣ್ಣದ ರಾಖಿಯನ್ನು ಕಟ್ಟುವುದು ಕೂಡ ತುಂಬಾ ಒಳ್ಳೆಯದು ಇದು ಸಹೋದರನ ಮಾನಸಿಕ ಸ್ಥಿತಿಯನ್ನು ಬಲಗೊಳಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಹಳದಿ ಬಣ್ಣದ ರಾಖಿ ಶುಭವೆಂದು ಪುರಾಣಗಳಲ್ಲಿಯೂ ಹೇಳಲಾಗಿದೆ.