ತುಮಕೂರು, ಆಗಸ್ಟ್ 15: ಗಣೇಶೋತ್ಸವ ಹೆಸರೇಳಿಕೊಂಡು ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಯಾರಾದರೂ ಅಂತಹ ಪ್ರಯತ್ನ ಮಾಡಿದರೆ ಕಾನೂನು ಕ್ರಮ ಆಗುತ್ತೆ ಎಂದು ಗೃಹ ಇಲಾಖೆ ಸಚಿವ ಡಾ.ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆಗೆ ನಾನು ಮನವಿ ಮಾಡಿಕೊಳುತ್ತೇನೆ. ಶಾಂತಿಯಿಂದ ಗಣೇಶೋತ್ಸವ ಆಚರಿಸೋಣ. ಅದಕ್ಕೆ ಬೇಕಾದಂತಹ ವಾತಾವರಣ ನಾವು ತಮಗೆ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಕಳೆದ ಬಾರಿ ಸೆಪ್ಟೆಂಬರ್ನಲ್ಲಿ ಗಣೇಶೋತ್ಸವ ಆಚರಣೆ ಮಾಡಲಾಗಿತ್ತು. ಈ ಬಾರಿಯೂ ಸೆ.7ರಂದು ಗಣಪತಿಯ ಉತ್ಸವ ಪ್ರಾರಂಭ ಆಗುತ್ತೇವೆ. ನನಗೆ ವಿಶ್ವಾಸ ಇದೆ, ನಮ್ಮ ಕರ್ನಾಟಕದ ಜನತೆ ಶಾಂತಿ ಪ್ರಿಯರು. ಅಂತಹ ಘಟನೆಗಳು ನಡೆಯೋದಕ್ಕೆ ಬಿಡಲ್ಲ. ಎಲ್ಲಾ ಸಹಕಾರ ಇರಲಿ ಎಂದಿದ್ದಾರೆ.
ರಾಜ್ಯದ ಜನರಿಗೆ ನಮ್ಮ ಸರ್ಕಾರ ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟಿತ್ತು. ಯಾವುದೇ ಅಹಿತಕರವಾದ ಘಟನೆಗಳು ನಡೆಯೋದಕ್ಕೆ ನಾವು ಬಿಡಲ್ಲ. ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು. ಎಲ್ಲಾ ಸಮುದಾಯಗಳು ಶಾಂತಿಯಿಂದ ಬಾಳಬೇಕೆಂದು ನಾವು ಹೇಳಿದ್ದೇವೆ.
ರಾಜ್ಯದಲ್ಲಿ ಕಳೆದ 1 ವರ್ಷದಿಂದ ಯಾವುದೇ ಕೋಮುಗಲಭೆಗಳಾಗಲಿ, ಅಹಿತಕರವಾದಂತಹ ಗಲಾಟೆಗಳನ್ನು ನಡೆಯೋದಕ್ಕೆ ರಾಜ್ಯ ಸರ್ಕಾರ ಮತ್ತು ವಿಶೇಷವಾಗಿ ಗೃಹ ಇಲಾಖೆ ಅವಕಾಶ ಕೊಟ್ಟಿಲ್ಲ. ರಾಜ್ಯದ ಜನರು ಸಹಕರಿಸಿದ್ದಾರೆ, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.