ತುಮಕೂರು: ನಗರದ ಕುಣಿಗಲ್ ರಸ್ತೆಯಲ್ಲಿ ಸಾಹುಕಾರ್ ಫ್ಯುಯೆಲ್ ಪಾರ್ಕ್ ಅಂತ ಹೆಚ್ ಪಿ ಪೆಟ್ರೋಲ್ ಬಂಕ್ ಇದೆ. ದ್ವಿಚಕ್ರ ವಾಹನ ಸವಾರೊಬ್ಬರು ಕಳೆದ ರಾತ್ರಿ ₹110 ಕ್ಕೆ ಪೆಟ್ರೋಲ್ ಹಾಕಿಸಿಕೊಂಡಾಗ ಅವರ ಗಾಡಿಯಲ್ಲಿ ಸುರಿಯಲ್ಪಟ್ಟಿದ್ದು ಕೇವಲ 300 ಮಿಲೀ ಇಂಧನ ಮಾತ್ರ. ಬೈಕ್ ಸವಾರ ಬಿಲ್ ತೆಗೆಸಿದಾಗ ವಂಚನೆ ಬಯಲಿಗೆ ಬಂದಿದೆ. ಯಾಕೆ ಹೀಗೆ ಅಂತ ಕೇಳಿದರೆ ಉಡಾಫೆಯ ಉತ್ತರ ಬಂಕ್ ನವರಿಂದ ಸಿಕ್ಕಿದೆ. ಸ್ಥಳೀಯರು ಹೇಳುವ ಪ್ರಕಾರ ಪೆಟ್ರೋಲ್ ಬಂಕ್ ನವರು ನಾರ್ಮಲ್ ಪೆಟ್ರೋಲ್ ದಾಸ್ತಾನಿದ್ದರೂ, ಅದು ಮುಗಿದಿದೆ ಕೇವಲ ಪವರ್ ಪೆಟ್ರೋಲ್ ಮಾತ್ರ ಇದೆ ಅನ್ನುತ್ತಾರಂತೆ. ಯಾಕೆಂದರೆ ಪವರ್ ಪೆಟ್ರೋಲ್ ಬೆಲೆ ಹೆಚ್ಚು. ಪೊಲೀಸರಿಗೆ ದೂರು ದಾಖಲಿಸಲಾಗಿದೆ, ಅವರೇನು ಕ್ರಮ ತೆಗೆದುಕೊಳ್ಳುತ್ತಾರೋ ನೋಡಬೇಕು ಎಂದು ವಂಚನೆಗೊಳಗಾದ ಸ್ಥಳೀಯರು ಹೇಳುತ್ತಾರೆ.