ನೆಲಮಂಗಲ: ಹೆಚ್​ಐವಿ ಸೋಂಕಿತನ ಮೇಲೆ ಸಲಿಂಗ ಕಾಮಿಯಿಂದ ಅತ್ಯಾಚಾರ, ಮನೆ ದರೋಡೆ

ನೆಲಮಂಗಲ, ಜುಲೈ 01: ಹೆಚ್​ಐವಿ ಸೋಂಕಿತನ ಮೇಲೆ ಸಲಿಂಗ ಕಾಮಿ ಅತ್ಯಾಚಾರ ಎಸಗಿ, ಬಳಿಕ ಆತನ ಮನೆಯಲ್ಲಿದ್ದ ನಗದು, ಚಿನ್ನಭರಣ ದೋಚಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ನಡೆದಿದೆ. 56 ವರ್ಷದ ಹೆಚ್​ಐವಿ ಸೋಂಕಿತ ವ್ಯಕ್ತಿ ನೆಟ್ ವರ್ಕ್ ಪಾಸಿಟಿವ್ ಪೀಪಲ್ ಎಂಬ ಹೆಸರಿನ ಎನ್​ಜಿಒನಲ್ಲಿ ಕೆಲಸ ಮಾಡುತ್ತಿದ್ದರು. ಒಂದು ವರ್ಷದ ಹಿಂದೆ ಶ್ಯಾಮ್ ಪಾಟೀಲ್ ಎಂಬ ವ್ಯಕ್ತಿ ತನಗೆ ಟಿಬಿ ಕಾಯಿಲೆ ಇದೆ ಎಂದು ಹೆಚ್​ಐವಿ ಸೋಂಕಿತ ವ್ಯಕ್ತಿಗೆ ಪರಿಚಯನಾಗಿದ್ದನು.

ಇತ್ತೀಚಿಗೆ ಹೆಚ್​ಐವಿ ಸೋಂಕಿತನ ಹೆಂಡತಿ ಮತ್ತು ಮಕ್ಕಳು ಸಂಬಂಧಿಕರ ಮನೆಗೆ ಹೋಗಿದ್ದರು. ಈ ವಿಚಾರ ತಿಳಿದು ಸಲಿಂಗಿ ಕಾಮಿ ಶ್ಯಾಮ್ ಪಾಟೀಲ್ ಹೆಚ್​ಐವಿ ಸೋಂಕಿತನ ಮನೆಗೆ ಬಂದಿದ್ದಾನೆ. ಬಳಿಕ ಜ್ಯೂಸ್​ನಲ್ಲಿ ನಿದ್ರೆ ಮಾತ್ರೆ ಹಾಕಿ ಹೆಚ್​ಐವಿ ಸೋಂಕಿತನಿಗೆ ನೀಡಿದ್ದಾನೆ. ಅಲ್ಲದೆ, ಹೆಚ್​ಐವಿ ಸೋಂಕಿತ ವ್ಯಕ್ತಿಯ ಮುಖಕ್ಕೆ ಸ್ಪ್ರೇ ಹೊಡೆದು ಪ್ರಜ್ಞೆ ತಪ್ಪಿಸಿದ್ದಾನೆ.

ಬಳಿಕ ಶ್ಯಾಮ್​ ಪಾಟೀಲ್​ ಆತನ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ಮನೆಯ ಬೀರುವಿನಲ್ಲಿದ್ದ 88ಗ್ರಾಂ ಚಿನ್ನಭರಣ, 20 ಸಾವಿರ ನಗದು ಮೊಬೈಲ್​ ಮೊಬೈಲ್ ದೋಚಿ ಸಲಿಂಗ ಕಾಮಿ ಶ್ಯಾಮ್​ ಪಾಟೀಲ್​ ಪರಾರಿಯಾಗಿದ್ದಾನೆ.

ಬೆಳಗ್ಗೆ ಎಚ್ಚರಗೊಂಡಾಗ ಹೆಚ್​ಐವಿ ಸೋಂಕಿತನಿಗೆ ತನ್ನ ಮೇಲೆ ಆದ ದೌರ್ಜನ್ಯ ಮತ್ತು ಮನೆಯಲ್ಲಿದ್ದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದು ಅರಿವಾಗಿದೆ. ಬಳಿಕ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸ್ದಾರೆ. ಆರೋಪಿ ಶ್ಯಾಮ್​ ಪಾಟೀಲ್​ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.