ಹೊನ್ನಾವರದ ಹೊಸಪಟ್ಟಣ ಕ್ರಾಸ್ ಬಳಿ ಪಲ್ಟಿಯಾದ ಆ್ಯಂಬುಲೆನ್ಸ್

ಹೊನ್ನಾವರ ಜೂನ್‌ 30 : ಕುಮಟಾ ಕೆನರಾ ಹೆಲ್ತ್‌ಕೇರ್‌ನಿಂದ ಮಂಗಳೂರು ಶ್ರೀನಿವಾಸ ಆಸ್ಪತ್ರೆಗೆ ಪಾರ್ಶ್ವವಾಯು ತುತ್ತಾದ ರೋಗಿಯನ್ನು ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಘಟನೆ ಶನಿವಾರ ಸಾಯಂಕಾಲ ಸಂಭವಿಸಿದೆ.

ಪಲ್ಟಿಯಾದ ಪರಿಣಾಮ ಪಾರ್ಶ್ವವಾಯುವಿಗೆ ತುತ್ತಾದ ಕಮಲಾ ಪಟಗಾರ ಹಾಗೂ ಅಂಬುಲೆನ್ಸ್ ಚಾಲಕ ಸೋಮನಾಥ ನಾಯ್ಕ ಇವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಂಬ್ಯುಲೆನ್ಸ್ ರಸ್ತೆ ಅಂಚಿನ ಮಣ್ಣಿನ ಮೇಲೆ ಬಿದ್ದಿರುವ ಕಾರಣ ದೊಡ್ಡ ಅನಾಹುತ ತಪ್ಪಿದೆ. ವಾಹನದಲ್ಲಿ ಕಮಲಾ ಪಟಗಾರ ಹಾಗೂ ರೋಗಿಯ ಸಂಬಂಧಿಕರು ಮತ್ತು ಚಾಲಕ ಸೇರಿ ಒಟ್ಟೂ 4 ಜನರಿದ್ದು, ನಂತರ ರೋಗಿ ಹಾಗೂ ರೋಗಿಯ ಸಂಬಂಧಿಕರನ್ನು ಬೇರೆ ಅಂಬುಲೆನ್ಸ್ ವಾಹನದಲ್ಲಿ ಮಂಗಳೂರಿಗೆ ಕಳುಹಿಸಿಕೊಡಲಾಗಿದೆ.