ದೇಶಕ್ಕೆ ಮುಂಗಾರು ಆಗಮಿಸಿದೆ. ಹಲವು ರಾಜ್ಯಗಳಲ್ಲಿ ಭಾರೀ ಮಳೆ ಆರಂಭವಾಗಿದೆ. ಈ ಅವಧಿಯಲ್ಲಿ ಜನರು ಅನೇಕ ರೋಗಗಳಿಂದ ಬಳಲುತ್ತಿದ್ದಾರೆ. ಮಲೇರಿಯಾ, ಡೆಂಗ್ಯೂ ಸೇರಿ ಇದೀಗ ಪುಣೆಯಲ್ಲಿ ಇಬ್ಬರಲ್ಲಿ ಝಿಕಾ ವೈರಸ್ ಸೋಂಕಿತರು ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಸಂಕಷ್ಟಕ್ಕೆ ಸಿಲುಕಿದೆ. ವೈದ್ಯರು ಮತ್ತು ಅವರ 13 ವರ್ಷದ ಮಗಳಲ್ಲಿ ರೋಗಲಕ್ಷಣಗಳು ಕಂಡುಬಂದಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇಬ್ಬರಿಗೂ ಜ್ವರ ಹಾಗೂ ದದ್ದುಗಳಂತಹ ಲಕ್ಷಣಗಳು ಕಾಣಿಸಿಕೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ತದ ಮಾದರಿಯನ್ನು ತೆಗೆದುಕೊಂಡಿರುವ ವೈದ್ಯರು ಇದು ಝಿಕಾ ವೈರಸ್ ಎಂದು ದೃಢಪಡಿಸಿದ್ದಾರೆ.
ಈಗ ಕುಟುಂಬದ ಐದು ಮಂದಿ ಸದಸ್ಯರ ರಕ್ತದ ಮಾದರಿಯನ್ನೂ ತೆಗೆದುಕೊಳ್ಳಲಾಗಿದೆ. ಈ ಸೋಂಕು ಮೊದಲು 1947ರಲ್ಲಿ ಉಂಗಾಡದಲ್ಲಿ ಗುರುತಿಸಲಾಯಿತು. ಒಂದೊಮ್ಮೆ ಗರ್ಭಿಣಿಯರಿಗೆ ಸೋಂಕು ತಗುಲಿದರೆ ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
46 ವರ್ಷದ ವೈದ್ಯರು ಮತ್ತು ಅವರ 13 ವರ್ಷದ ಮಗಳಲ್ಲಿ ರೋಗಲಕ್ಷಣಗಳು ಕಂಡುಬಂದಿವೆ. ಈ ರೋಗವು ಸೊಳ್ಳೆಗಳಿಂದ ಉಂಟಾಗುತ್ತದೆ. ಗರ್ಭಿಣಿಯರು ಹೆಚ್ಚು ಅಪಾಯದಲ್ಲಿದ್ದಾರೆ. ಇದರಿಂದಾಗಿ ಇಂತಹ ಮಹಿಳೆಯರು ಹೆಚ್ಚು ಜಾಗರೂಕರಾಗಿರಬೇಕು ಎಂದು ಹೇಳಲಾಗುತ್ತಿದೆ.
ಹವಾಮಾನ ವೈಪರೀತ್ಯದಿಂದ ಡೆಂಗ್ಯೂ, ಮಲೇರಿಯಾ, ಚಿಕೂನ್ ಗುನ್ಯಾ ಸೇರಿದಂತೆ ಇತರೆ ರೋಗಗಳೂ ಹೆಚ್ಚಾಗತೊಡಗಿವೆ. ಝಿಕಾ ವೈರಸ್ ಈಡಿಸ್ ಈಜಿಪ್ಟಿ ಸೊಳ್ಳೆಯಿಂದ ಉಂಟಾಗುವ ಕಾಯಿಲೆಯಾಗಿದ್ದು, ಈ ರೋಗದ ಶೇಕಡಾ 80 ರಷ್ಟು ರೋಗಿಗಳು ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ.
ಕೆಲವು ರೋಗಿಗಳು ಜ್ವರ, ಕೀಲು ನೋವು, ದೇಹದ ನೋವು, ತಲೆನೋವು, ಕೆಂಪು ಕಣ್ಣುಗಳು, ವಾಂತಿ, ಅಸ್ವಸ್ಥತೆ, ಜ್ವರ ಮತ್ತು ದೇಹದ ದದ್ದುಗಳನ್ನು ಅನುಭವಿಸುತ್ತಾರೆ. ಝಿಕಾ ರೋಗಿ ಪತ್ತೆಯಾದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯೂ ಎಚ್ಚೆತ್ತುಕೊಂಡಿದೆ.
ಇದನ್ನು ತಡೆಯುವುದು ಹೇಗೆ? ಮನೆಗಳಲ್ಲಿ ಸೊಳ್ಳೆಗಳನ್ನು ತಪ್ಪಿಸಿ, ಸ್ವಚ್ಛವಾಗಿಡಿ, ಸೊಳ್ಳೆ ಪರದೆಗಳನ್ನು ಬಳಸಿ ಹೆಚ್ಚು ಕಾಲ ನೀರು ನಿಲ್ಲದಂತೆ ನೋಡಿಕೊಳ್ಳಿ ಎರಡು ದಿನಗಳ ಕಾಲ ಜ್ವರ ಮುಂದುವರೆದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.ಮನೆಯ ಒಳಾಂಗಣ ಹಾಗೂ ಹೊರಾಂಗಣವನ್ನು ಸ್ವಚ್ಚವಾಗಿಡಬೇಕು, ನೀರು ಸಂಗ್ರಹಣಾ ಪರಿಕರಗಳನ್ನು ವಾರಕ್ಕೊಮ್ಮೆ ಸ್ವಚ್ಚಗೊಳಿಸುವುದು ಹಾಗೂ ಮುಚ್ಚಳದಿಂದ ಮುಚ್ಚಬೇಕು.