ಹೆಚ್ಚುವರಿ ಹಾಲು, ಹೆಚ್ಚು ಬೆಲೆಯೆಂದ ಸಿಎಂ; ಯಾವ ಪ್ಯಾಕೆಟ್​​ಗೆ ಎಷ್ಟು ದರ? ಇಲ್ಲಿದೆ ಪಟ್ಟಿ

ಬೆಂಗಳೂರು, ಜೂನ್ 26: ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆ ಆಗಿಲ್ಲ. ಹೆಚ್ಚುವರಿಯಾಗಿ 50 ಎಂಎಲ್​ ಹಾಲನ್ನು ನೀಡಿ, ಆ ಹಾಲಿಗೆ 2 ರೂಪಾಯಿ ಪಡೆಯುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಾರುಕಟ್ಟೆ ಮಾಡಲು ಹೆಚ್ಚುವರಿ 50 ಎಂಎಲ್ ಹಾಲು ನೀಡುತ್ತಿದ್ದೇವೆ. ಅರ್ಧ ಲೀಟರ್​ ಪ್ಯಾಕೆಟ್​ನಲ್ಲಿ 550 ಎಂಎಲ್ ಹೆಚ್ಚುವರಿಯಾಗಿ ನೀಡುತ್ತಿದ್ದೇವೆ. ಒಂದು ಲೀಟರ್​ ಪ್ಯಾಕೆಟ್ ಬದಲಿಗೆ ಇನ್ನು 1050 ಎಂಎಲ್​​ ನೀಡುತ್ತೇವೆ. ರೈತರಿಂದ ಹಾಲು ಪಡೆಯಲ್ಲ ಎಂದು ಹೇಳಲು ಆಗುತ್ತದೆಯೇ ಎಂದು ಅವರು ಹೇಳಿದ್ದಾರೆ.

ಹಾಲಿನ ಬೆಲೆ ಏರಿಕೆ ಮಾಡಲಾಗಿದೆ ಎಂದು ಪ್ರತಿಪಕ್ಷ ಬಿಜೆಪಿ ಮತ್ತು ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಈ ಸ್ಪಷ್ಟನೆ ನೀಡಿದ್ದಾರೆ.

ಒಂದು ಲೀಟರ್ ನಂದಿನಿ ಹಾಲಿನ ಪ್ಯಾಕೆಟ್​​ಗೆ 50 ಎಂಎಲ್​​ ಹಾಲು ಹೆಚ್ಚುವರಿಯಾಗಿ ಸೇರಿಸಿ 2 ರೂಪಾಯಿ ಹೆಚ್ಚಳ ಮಾಡಲಾಗುವುದು ಎಂದು ಕರ್ನಾಟಕ ಹಾಲು ಮಹಾಮಂಡಳ ಕೆಎಂಎಫ್ ಮಂಗಳವಾರ ಘೊಷಿಸಿತ್ತು.

ನಂದಿನಿ ಹಾಲಿನ ಪರಿಷ್ಕೃತ ದರ ಪಟ್ಟಿ ಇಲ್ಲಿದೆ (ದರ ರೂಪಾಯಿಗಳಲ್ಲಿದೆ)

ನಂದಿನ ಹಾಲಿನ ಮಾದರಿಪ್ರಸ್ತುತ ದರ 500 ಎಂಎಲ್​ಗೆ550 ಎಂಎಲ್​ ದರಪ್ರಸ್ತುತ ದರ 1000 ಎಂಎಲ್​ಗೆ1050 ಎಂಎಲ್​ ದರ
ಟೋನ್ಡ್ ಹಾಲು22244244
ಹೋಮೋಜಿನೈಸ್ಡ್ ಟೋನ್ಡ್ ಹಾಲು22244345
ಹೋಮೋಜಿನೈಸ್ಡ್ ಹಸುವಿನ ಹಾಲು24264648
ಸ್ಪೆಷಲ್ ಹಾಲು25274850
ಶುಭಂ ಹಾಲು25274850
ಸಮೃದ್ಧಿ ಹಾಲು26285153
ಹೋಮೋಜಿನೈಸ್ಡ್ ಶುಭಂ ಹಾಲು25274951
ಸಂತೃಪ್ತಿ ಹಾಲು28305557
ಶುಭಂ ಗೋಲ್ಡ್ ಹಾಲು26284951
ಡಬಲ್ ಟೋನ್ಡ್ ಹಾಲು21234143
ಬಿಜೆಪಿಯವರು ರೈತರ ವಿರೋಧಿಗಳು; ಡಿಕೆಶಿ

ನಂದಿನಿ ಹಾಲಿನ ದರ ಏರಿಕೆಗೆ ಬಿಜೆಪಿ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿಯವರು ರೈತರ ವಿರೋಧಿಗಳು ಎಂದಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಜಾಸ್ತಿಯಾಗಿರುವ 2 ರೂ. ರೈತರಿಗೆ ತಲುಪುತ್ತದೆ. ರೈತರಿಗೆ ಹಣ ತಲುಪುವಿದಲ್ಲ ಎಂದು ಯಾರು ಹೇಳಿದರು ಎಂದು ಪ್ರಶ್ನಿಸಿದರು.

ಕೆಎಂಎಫ್​ ಉಳಿದರೆ ರೈತರು ಉಳಿದಂತೆ. ರೈತರು ಸಾಲದಿಂದ ಹಸುಗಳನ್ನು ಮಾರಾಟ ಮಾಡ್ತಿದ್ದಾರೆ. ಬಿಜೆಪಿಯವರ ರೈತ ವಿರೋಧಿ ಧೋರಣೆ ಎದ್ದು ಕಾಣುತ್ತದೆ. ಬೇರೆ ರಾಜ್ಯದಲ್ಲಿ ಎಷ್ಟಿದೆ ನೋಡಲಿ, ಮಾಹಿತಿ ಪಡೆಯಲಿ ಎಂದು ಅವರು ಹೇಳಿದರು.