ಸಿದ್ದಾಪುರ: ಅಂಚೆ ಇಲಾಖೆಯ ಖಾಸಗೀಕರಣವನ್ನು ವಿರೋಧಿಸಿ ಸಿದ್ದಾಪುರ ತಾಲೂಕಿನ ಅಂಚೆ ಇಲಾಖೆಯ ನೌಕರರು ಬುಧವಾರ ಮುಷ್ಕರ ನಡೆಸಿದರು.
ಅಂಚೆ ಇಲಾಖೆ ನೌಕರರ ಖಾಸಗೀಕರಣ ವಿರೋಧಿಸುವ ಜತೆಗೆ ಈವರೆಗೂ ಈಡೇರಿಸದೇ ಇರುವ ಹಲವಾರು ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು. ಸ್ಥಗಿತಗೊಳಿಸಲಾಗಿರುವ ಸೌಲಭ್ಯಗಳನ್ನು ಬಿಡುಗಡೆ ಮಾಡಬೇಕು. ಸಾಂದರ್ಭಿಕ ಕೆಲಸಗಾರರನ್ನು ಕ್ರಮಬದ್ಧಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಇಡೇರಿಸುವಂತೆ ಆಗ್ರಹಿಸಿ ಒಂದು ದಿನದ ಮುಷ್ಕರ ನಡೆಸಿದರು.