ಮುಧೋಳ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ನಕಲಿ ಆರ್ಎಂಡಿ ಗುಟ್ಕಾ ತಯಾರಿಕೆ ಮಾಡುವ ಜಾಲವನ್ನು ಪತ್ತೆ ಮಾಡಿದ್ದಾರೆ. ಜೊತೆಗೆ ದೆಹಲಿ, ಹೈದ್ರಾಬಾದ್, ಬೆಳಗಾವಿ ಹಾಗೂ ನಿಪ್ಪಾಣಿ ಮೂಲದವರಾದ ಏಳು ಆರೋಪಿಗಳನ್ನು ಬಂಧಿಸಿದ್ದಾರೆ.
ಬಾಗಲಕೋಟೆ, ಜೂ.12: ಬಾಗಲಕೋಟೆ ಜಿಲ್ಲೆಯ ಮುಧೋಳ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ನಕಲಿ ಆರ್ಎಂಡಿ ಗುಟ್ಕಾ ತಯಾರಿಕೆ ಮಾಡುವ ಜಾಲವನ್ನು ಪತ್ತೆ ಮಾಡಿದ್ದಾರೆ. ಮಹಾಂತೇಶ್ ಮೂಲಿಮನಿ ಎಂಬುವವರ ದೂರಿನ ಮೇಲೆ ಕಾರ್ಯಾಚರಣೆ ಆರಂಭಿಸಿದ್ದ ಪೊಲೀಸರು, ಆರ್ಎಂಡಿ ಪಾನ್ ಮಸಾಲಾ ಮತ್ತು ಎಂ ಗೋಲ್ಡ್ ಸೆಂಟೆಡ್ ಟೊಬ್ಯಾಕೋ ಹೆಸರಿನ ಪೌಚ್ ತಯಾರಿಕೆ ಮಾಡುತ್ತಿದ್ದವರ ದಾಳಿ ಮಾಡಿ, ಏಳು ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಮಹಮ್ಮದ ವಶೀಮ್ ಮುನೀರ, ಹಿಮಾಯತ, ಮಹ್ಮದ್, ವಿಕಾಸ್ ಚವ್ಹಾಣ, ಸಂತೋಷ ಬಳ್ಳೋಳ್ಳೆ, ಜಹೀರ , ಇಕ್ವಾಲ್ ಎಂಬ ಆರೋಪಿಗಳನ್ನ ವಶಕ್ಕೆ ಪಡೆದಿದ್ದು, ಬಂಧಿತರು ದೆಹಲಿ, ಹೈದ್ರಾಬಾದ್, ಬೆಳಗಾವಿ ಹಾಗೂ ನಿಪ್ಪಾಣಿ ಮೂಲದವರಾಗಿದ್ದಾರೆ. ಇವರಿಂದ ಸುಮಾರು 30 ಲಕ್ಷ ರೂ. ಮೌಲ್ಯದ ಎಂ ಗೋಲ್ಡ್ ಸೆಂಟೆಡ್ ಟೊಬ್ಯಾಕೋ ಹಾಗೂ ಆರ್ಎಂಡಿ ಪಾನ್ ಮಸಾಲಾ ಮತ್ತು ನಕಲಿಯಾಗಿ ತಯಾರಿಸಲು ಬಳಸುವ ಪ್ರಿಂಟೇಡ್ , ಕಟಿಂಗ್ ಮಶೀನ್ಗಳನ್ನು ಜಪ್ತಿ ಮಾಡಿದ್ದಾರೆ.