ಗೋಕರ್ಣ ಮಹಾಬಲೇಶ್ವರ ದೇಗುಲಕ್ಕೆ ನುಗ್ಗಿದ ನೀರು – ಆತ್ಮಲಿಂಗ ಜಲಾವೃತ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಿದ್ದು, ಉತ್ತರ ಕನ್ನಡ, ಬಳ್ಳಾರಿ, ಕಲಬುರಗಿಯಲ್ಲಿ ಅವಾಂತರ ಸೃಷ್ಟಿ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಸ್ಥಾನಕ್ಕೆ ಮಳೆ ನೀರು ನುಗ್ಗಿದ್ದು, ಮಹಾಬಲೇಶ್ವರನ ಆತ್ಮಲಿಂಗ ಹೊರ ನೀರಿನಿಂದ ಜಲಾವೃತಗೊಂಡಿದೆ.

ಕುಮಟಾ : ಜೂ.07 : ಬೆಂಗಳೂರು ಸೇರಿದಂತೆ ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆ ಯಾಗಿದ್ದು, ಹಲವಾರು ಅವಾಂತರಗಳು ಆಗಿವೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿರುವ ಗೋಕರ್ಣ ಮಹಾಬಲೇಶ್ವರ ದೇವಸ್ಥಾನಕ್ಕೆ ಮಳೆ ನೀರು ನುಗ್ಗಿದ್ದು, ಮಹಾಬಲೇಶ್ವರನ ಆತ್ಮಲಿಂಗ ಹೊರ ನೀರಿನಿಂದ ಜಲಾವೃತವಾಗಿದೆ. ಈ ಹಿನ್ನಲೆ ದೇವಸ್ಥಾನದ ಸಿಬ್ಬಂದಿಗಳು ಗರ್ಭಗುಡಿಯಲ್ಲಿನ ನೀರು ಹೊರಹಾಕಲು ಪರದಾಟ ನಡೆಸಿದ್ದಾರೆ.