ಬೆಂಗಳೂರು, ಏಪ್ರಿಲ್ 29: ನಗರದ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಾದ ಮೊಹಮ್ಮದ್ ಮತೀನ್ ಮತ್ತು ಮುಸಾವಿರ್ ಹುಸೇನ್ಗೆ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಎನ್ಐಎ ವಿಶೇಷ ಕೋರ್ಟ್ ಸೋಮವಾರ ಆದೇಶ ಹೊರಡಿಸಿದೆ. ಆರೋಪಿಗಳ NIA ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಕೋರ್ಟ್ಗೆ ಹಾಜರುಪಡಿಸಿದ್ದರು. ಹಿಗಾಗಿ ಆರೋಪಿಗಳನ್ನು ಎನ್ಐಎ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಮಾರ್ಚ್ 1 ಮಧ್ಯಾಹ್ನ 12:55 ರ ಸುಮಾರಿಗೆ ಮಾರತ್ ಹಳ್ಳಿ ಸಮೀಪದ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ನಡೆದಿತ್ತು. ಬಾಂಬರ್ ಇನ್ನೇ ತಗಲಾಕ್ಕೊಂಡ ಅನ್ನುವಷ್ಟ್ರಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ. ಆದರೆ, ಎನ್ಐಎ ಟೀಂ 43 ದಿನಗಳ ಬಳಿಕ, ಪಶ್ಚಿಮ ಬಂಗಾಳದಲ್ಲಿ ಬಾಂಬರ್ ಹಾಗೂ ಮಾಸ್ಟರ್ ಮೈಂಡ್ನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಬಂಧಿತರ ವಿಚಾರಣೆ ನಡೆಸಿದ್ದು ಬೆಚ್ಚಿ ಬೀಳಿಸುವ ಸಂಗತಿ ಬಯಲಾಗಿದ್ದವು.
ಎನ್ಐಎ ವಿಚಾರಣೆ ವೇಳೆ ಬಾಂಬರ್ ಮುಸಾವೀರ್ ಹಾಗೂ ಮತೀನ್ ತಾಹ ಆಘಾತಕಾರಿ ಸತ್ಯ ಹೊರಹಾಕಿದ್ದರು. ರಾಜೇಶ್ವರಂ ಕೆಫೆ ಸ್ಫೋಟಕ್ಕೂ ಮುನ್ನವೇ, ವೈಟ್ಫೀಲ್ಡ್ ಭಾಗದ ಎಸ್ಇಜೆಡ್ ಏರಿಯಾ ದುಷ್ಟರ ಟಾರ್ಗೆಟ್ ಅನ್ನೋದನ್ನ ತಿಳಿಸಿದ್ದರು. ಎಸ್ಇಎಝ್ ಅಂದರೆ ಸ್ಪೆಷಲ್ ಎಕಾನಮಿ ಜೋನ್.. ಅತಾರ್ಥ್ ವಿಶೇಷ ಆರ್ಥಿಕ ವಲಯಗಳು ಎಂದರ್ಥ.
ಐಟಿಬಿಪಿ ಕಂಪನಿಗಳು ಹೆಚ್ಚಿರುವ ಈ ಬಾಗದಲ್ಲಿ ಬ್ಲಾಸ್ಟ್ ಮಾಡಿದರೆ, ಜಾಗತಿಕ ಮಟ್ಟದಲ್ಲಿ ಸದ್ದು ಮಾಡಬಹುದು. ಐಸಿಸ್ ಸಂಘಟನೆ ನಮ್ಮನ್ನ ಸಲೀಸಾಗಿ ಸೇರಿಸಿಕೊಳ್ಳುತ್ತೆ ಅನ್ನೋ ನಂಬಿಕೆ ಇತ್ತಂತೆ. ಆದರೆ ಐಟಿಬಿಟಿ ಏರಿಯಾದಲ್ಲಿ, ಸೆಕ್ಯೂರಿಟಿ ಬಿಗಿಯಾಗಿದ್ರಿಂದ ಸ್ಫೋಟದ ಪ್ಲ್ಯಾನ್ ವರ್ಕೌಟ್ ಆಗ್ಲಿಲ್ಲ. ಹೀಗಾಗಿ, ಇದು ಸೇಫ್ ಅಲ್ಲ ಅಂತ ಮುಂದೆ ಸಾಗಿದವರ ಕಣ್ಣಿಗೆ ಬಿದ್ದದ್ದೇ ಈ ರಾಮೇಶ್ವರಂ ಕೆಫೆ.
ರಾಮೇಶ್ವರಂ ಕೆಫೆ ಕಂಡ ಉಗ್ರರಿಗೆ ಕೋಪ ಹೆಚ್ಚಾಗಿತ್ತು. ಕಾರಣ, ಕೆಫೆ ಮುಂದಿದ್ದ ಹೂವಿನ ಅಲಂಕಾರ, ಕೇಸರಿ ಮಯವಾಗಿದ್ದ ಕಲರ್ ಪೇಪರ್ಸ್. ದೇಶಾದ್ಯಂತ ರಾಮಮಂದಿರ ಉದ್ಘಾಟನೆ ಸಂಭ್ರಮ ಇದಿದ್ರಿಂದ ಎಲ್ಲೆಲ್ಲೂ ರಾಮಜಪ ಜೋರಾಗಿತ್ತು. ಹೀಗಾಗಿ, ರಾಮೇಶ್ವರಂ ಕೆಫೆ ಸ್ಫೋಟಿಸೋದೇ ಸೂಕ್ತ ಅಂತ ನಿರ್ಧರಿಸಿದ್ರಂತೆ. ಅದ್ರಂತೆ ಮಾರ್ಚ್ 1 ರಂದು ಬಾಂಬ್ ಇಟ್ಟು ಎಸ್ಕೇಪ್ ಆಗಿದ್ದಾಗಿ ಎನ್ಐಎ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದರು.