ಹುಬ್ಬಳ್ಳಿ, ಏಪ್ರಿಲ್ 25: ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ (Neha murder case) ಸಂಬಂಧಿಸಿದಂತೆ ರಾಜ್ಯವ್ಯಾಪಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಎಚ್ಚೆತ್ತ ಸರ್ಕಾರ ಪ್ರಕರಣವನ್ನು ಸಿಐಡಿಗೆ (CID) ನೀಡಲಾಯಿತು. ನಂತರ ತನಿಖೆ ಶುರುಮಾಡಿರುವ ಸಿಐಡಿ ಅಧಿಕಾರಿಗಳು ಆರೋಪಿ ಫಯಾಜ್ನನ್ನು 6 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ. ಜೊತೆಗೆ ಕ್ರೈಂ ನಡೆದ ಸ್ಥಳದಲ್ಲಿ ಮಹಜರು ಮಾಡುವ ಮೂಲಕ ಫೀಲ್ಡಿಗಿಳಿದ್ದಾರೆ. ಇದೀಗ ಆರೋಪಿ ಫಯಾಜ್ನ ಮತ್ತಷ್ಟು ಆತಂಕಕಾರಿ ವಿಷಯಗಳು ಬೆಳಕಿಗೆ ಬಂದಿವೆ.
ಕೊಲೆ ಮಾಡುವ ಕೆಲವು ದಿನಗಳ ಮುನ್ನ ಆರೋಪಿ ಫಯಾಜ್ ನೇಹಾ ಹಿರೇಮಠ ಮನೆ ಬಳಿಯೇ ಓಡಾಡಿದ್ದಾನೆ. ಆ ಮೂಲಕ ನೇಹಾ ಚಲನವಲನವನ್ನು ಗಮನಿಸಿದ್ದಾರೆ. ಆಕೆಯ ಪ್ರತಿಯೊಂದು ವಿಚಾರಗಳನ್ನು ಗಮನಿಸುತ್ತಿದ್ದ. ಇನ್ನು ಕೊಲೆ ಮಾಡುವ ಐದು ದಿನಗಳ ಮೊದಲೇ ಚಾಕುವೊಂದನ್ನು ಖರೀದಿ ಮಾಡಿದ್ದ.
ಏಪ್ರಿಲ್ 18 ರಂದು ನೇಹಾಳ ಪ್ರಾಕ್ಟಿಕಲ್ ಎಕ್ಸಾಂ ಇತ್ತು. ಈ ವಿಚಾರವನ್ನು ತಿಳಿದಿದ್ದ ಫಯಾಜ್ ಧಾರವಾಡದಿಂದ ಬೈಕ್ (KA24Y5781) ತೆಗೆದುಕೊಂಡು ಕಾಲೇಜ್ಗೆ ಬಂದಿದ್ದ. ಕೊಲೆ ಮಾಡುವ ಉದ್ಧೇಶದಿಂದಲೇ ರಸ್ತೆ ಕಡೆ ಮುಖ ಮಾಡಿ ಬೈಕ್ ನಿಲ್ಲಿಸಿದ್ದ.ಬಳಿಕ ಕಾಲೇಜ್ ಒಳಗಡೆ ಹೋಗಿ ಪ್ರಾಕ್ಟಿಕಲ್ ಎಕ್ಸಾಂ ನಡೆಯುವ ಹಾಲ್ನಲ್ಲಿ ಕೂತಿದ್ದ.
ಬಳಿಕ ಎಕ್ಸಾಂ ಮುಗಿಯುತ್ತಲೇ ನೇಹಾಳನ್ನು ಫಯಾಜ್ ಮಾತನಾಡಿಸಲು ಯತ್ನಿಸಿದ್ದಾನೆ. ಆದರೆ ನೇಹಾ ಇದಕ್ಕೆ ಪ್ರತಿಕ್ರಿಯಿಸಿಲ್ಲ. ಹೀಗಾಗಿ ರೊಚ್ಚಿಗೆದ್ದು ಚಾಕಿವಿನಿಂದ ಇರಿದು ಪರಾರಿ ಆಗಿದ್ದಾನೆ. ಈ ವೇಳೆ ಪೊಲೀಸರು ಮತ್ತು ಸಾರ್ವಜನಿಕರಿಂದ ಫಯಾಜ್ ನನ್ನು ವಶಕ್ಕೆ ಪಡೆಯಲಾಗಿದೆ.