ಭಟ್ಕಳ, ಏಪ್ರಿಲ್ 10 : ತಾಲೂಕಿನ ಹನುಮಾನ್ ನಗರದ ಹಿಂದೂ ಕಾರ್ಯಕರ್ತ ಶ್ರೀನಿವಾಸ ನಾಯ್ಕ ವಿರುದ್ಧದ ಗಡಿಪಾರು ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮದ್ಯಾಹ್ನ ಜಿಲ್ಲಾ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಗಡಿಪಾರಿಗೆ ಕಾರಣವೇನು ?
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ನಾಯ್ಕ ಅವರನ್ನು ಗಡಿಪಾರು ಮಾಡುವ ಬಗ್ಗೆ ಕಳೆದ ಮಾರ್ಚ್ 18ರಂದು ಜಿಲ್ಲಾಧಿಕಾರಿಯವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಅದರ ಮರುದಿನವೇ ಮಾ.19ರಂದು ಜಿಲ್ಲಾಧಿಕಾರಿ, ಶ್ರೀನಿವಾಸ ನಾಯ್ಕರಿಗೆ ನೋಟಿಸ್ ಜಾರಿಗೊಳಿಸಿದ್ರು.
ನ್ಯಾಯಾಲಯ ತಡೆಯಾಜ್ಞೆ ನೀಡಿದ ಬೆನ್ನಲ್ಲೇ ಹಿಂದೂ ಕಾರ್ಯಕರ್ತ ಶ್ರೀನಿವಾಸ ನಾಯ್ಕ, ವಕೀಲರಾದ ನಾಗರಾಜ ನಾಯ್ಕ ಹಾಗೂ ಜಿಲ್ಲೆಯ ಬಿಜೆಪಿಯ ಹಿರಿಕಿರಿಯ ಪದಾಧಿಕಾರಿಗಳಿಗೆ ಶ್ರೀನಿವಾಸ್ ನಾಯ್ಕ್ ತುಂಬು ಹೃದಯದ ಧನ್ಯವಾದ ಅರ್ಪಿಸಿದ್ದಾರೆ ಮತ್ತು ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಈ ಮೂಲಕ ನಿರೂಪಿಸಿದ್ದಾರೆ.