ಶಿರಸಿ-ಕುಮಟಾ ರಸ್ತೆಯಲ್ಲಿರುವ ಹಿಪ್ನಳ್ಳಿ ಕ್ರಾಸ್ ಬಳಿ ಊಟ ಮಾಡಿ ವಿಶ್ರಾಂತಿ ಪಡೆಯುತ್ತಿದ್ದ ರಸ್ತೆ ಕಾರ್ಮಿಕರ ಮೇಲೆ ಕಾರೊಂದು ಹರಿದ ಘಟನೆ ನಡೆದಿದೆ.
ಉತ್ತರ ಕನ್ನಡ, ಏಪ್ರಿಲ್ – 9: ಎಂದಿನಂತೆ ರಸ್ತೆ ಕಾಮಗಾರಿ ಕೆಲಸ ಮಾಡಿ, ಊಟದ ವೇಳೆ ವಿಶ್ರಾಂತಿ ಪಡೆದು ತಮ್ಮ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಕಾರ್ಮಿಕರಿಗೆ ಇಂದು ಇಂತದ್ದೊಂದು ಘಟನೆ ನಡೆಯುತ್ತೆ ಅಂತಾ ಅಂದು ಕೊಂಡಿರಲಿಲ್ಲ. ಯಮಸ್ವರೂಪಿಯಾಗಿ ಬಂದ ಕಾರೊಂದು ವಿಶ್ರಾಂತಿ ಪಡೆಯುತ್ತಿದ್ದ ಕಾರ್ಮಿಕರ ಮೇಲೆ ಹರಿದಿದೆ. ಪರಿಣಾಮ ಘಟನೆಯಲ್ಲಿ ಓರ್ವ ಮಗು ಸೇರಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಐವರಿಗೆ ಗಂಭೀರ ಗಾಯಗಳಾಗಿವೆ.
ಇನ್ನೂ ಗಾಯಗೊಂಡವರನ್ನು ಹೈದರಾಬಾದ್ ಮೆಹಬೂಬ ನಗರದ ಕಾರ್ಮಿಕರು ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಶಿರಸಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತು ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.