ಅಂಕೋಲಾ: ಹರಿಕಂತ್ರ ಸಮಾಜದ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಜಿಲ್ಲಾಮಟ್ಟದಲ್ಲಿ ಅಸ್ತಿತ್ವಕ್ಕೆ ಬಂದ ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘ(ರಿ)ದ ಅಂಕೋಲಾ ತಾಲೂಕು ಘಟಕದ ರಚನೆ ಪ್ರಕ್ರಿಯೆ ಶುಕ್ರವಾರ ನೆರವೇರಿತು.
ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಮಹೇಶ ದುರ್ಗೇಕರ, ಪ್ರಧಾನ ಕಾರ್ಯದರ್ಶಿಯಾಗಿ ಸಂದೀಪ ಹರಿಕಂತ್ರ ಆಯ್ಕೆಯಾಗಿದ್ದಾರೆ. ತಾಲೂಕು ಘಟಕದ ಉಪಾಧ್ಯಕ್ಷರಾಗಿ ಸೋಮೇಶ್ವರ ಮಂಜಗುಣಿ, ಪ್ರಶಾಂತ ಕೇಣಿಕರ, ವಿನೋದ ವಿ ಹರಿಕಂತ್ರ, ದೇವರಾಯ ಹರಿಕಂತ್ರ, ಕಾರ್ಯದರ್ಶಿಗಳಾಗಿ ಮುರಾರಿ ಹರಿಕಂತ್ರ, ರವಿ ಹರಿಕಂತ್ರ, ವಿಶ್ವನಾಥ ಹರಿಕಂತ್ರ ಸಂಘಟನಾ ಕಾರ್ಯದರ್ಶಿಗಳಾಗಿ ಸಂಜಯ ಬೊಬ್ರುಕರ, ಸೂರಜ್ ಹರಿಕಂತ್ರ ಕಾರ್ಯಾಧ್ಯಕ್ಷರಾಗಿ ವಿನೋದ ಹರಿಕಂತ್ರ ಹಾಗೂ ಖಜಾಂಚಿಯಾಗಿ ಪ್ರವೀಣ ಕೇಣಿಕರ ಆಯ್ಕೆಯಾಗಿದ್ದಾರೆ.
ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ದಿಲೀಪ್ ಅರ್ಗೇಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ರೋಷನ್ ಹರಿಕಂತ್ರ ಮತ್ತು ಜಿಲ್ಲಾ ಪದಾಧಿಕಾರಿಗಳ ಒಪ್ಪಿಗೆ ಮೇರೆಗೆ ಅಂಕೋಲಾ ತಾಲ್ಲೂಕು ಘಟಕವನ್ನು ರಚಿಸಲಾಗಿದೆ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾರುತಿ ಹರಿಕಂತ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.