ಈ ಬಾರಿ ಶಿರಸಿ ಶ್ರೀ ಮಾರಿಕಾಂಬಾ ಜಾತ್ರೋತ್ಸವ ಅದ್ಧೂರಿಯಾಗಿ ಜರುಗಿತು. ಲಕ್ಷಾಂತರ ಭಕ್ತರು ದೇವಿ ದರ್ಶನಕ್ಕೆ ಹರಿದು ಬಂದಿದ್ದು ವಿಶೇಷವಾಗಿತ್ತು. ಇನ್ನೊಂದು ವಿಶೇಷ ಅಂದ್ರೆ, ಇದೇ ಮೊದಲ ಬಾರಿಗೆ ಶಿರಸಿ ಜಾತ್ರೆಗೆ ಬಂದಿದ್ದ ದುಬೈ ಅಕ್ವೇರಿಯಂ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು…
ಅತ್ಯಾಕರ್ಷಕ ವಿದ್ಯುತ್ ದೀಪಗಳಿಂದ ಕೂಡಿದ ಟನಲ್.. ಟನಲ್ ಒಳಗಡೆ ಹಲವು ಜಾತಿಯ ಮೀನುಗಳು. ಮೀನುಗಳ ಜೊತೆ ಸೆಲ್ಪೀ ಗಾಗಿ ಮುಗಿಬಿದ್ದ ಜನ. ಈ ದೃಶ್ಯ ಕಂಡುಬಂದಿದ್ದು ಇನ್ನೆಲ್ಲೂ ಅಲ್ಲಾ ನಮ್ಮ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಜಾತ್ರೆಗೆ ಬಂದ ಆಕರ್ಷಣೀಯ ದುಬೈ ಅಕ್ವೇರಿಯಂ ನಲ್ಲಿ.
ಹೌದು… ಶಿರಸಿ ಜಾತ್ರೆ ಮುಗಿದರೂ ಜನರ ದಟ್ಟಣೆ ಮಾತ್ರ ಇವತ್ತಿಗೂ ಕಮ್ಮಿ ಆಗಿಲ್ಲ. ಶಿರಸಿ ಜಾತ್ರೆಗೆ ಬರುವ ಅನೇಕರನ್ನು ತನ್ನತ್ತ ಸೆಳೆವ ತಾಣವಾಗಿದ್ದು ಇದೇ ದುಬೈ ಅಕ್ವೇರಿಯಂ. ಜಾತ್ರೆ ಮುಗಿದು ನಾಲ್ಕು ದಿನ ಕಳೆದ್ರೂ, ಜಾತ್ರೆಯ ಸಂಭ್ರಮ ಮಾತ್ರ ಇದುವರೆಗೂ ಮುಗಿದಿಲ್ಲ. ಬೇಸಿಗೆ ರಜೆ ಹಿನ್ನೆಲೆ ಕುಟಂಬ ಸಮೇತ ಜಾತ್ರೆಗೆ ಬರುತ್ತಿರುವ ಜನ ಈ ಅಕ್ವೇರಿಯಂ ವೀಕ್ಷಣೆ ಮಾಡುತ್ತಿದ್ದಾರೆ..
ಇದು ಆಕರ್ಷಕ ಲೈಟ್‌ಗಳಿಂದ ಕಂಗೊಳಿಸುವ ಟನಲ್.. ಟನಲ್ ಒಳಗಡೆ ಹೋಗುತ್ತಿದ್ದಂತೆ ವಿವಿಧ ಜಾತಿಯ ಮೀನುಗಳು. ಮೀನುಗಳ ಜೊತೆ ಸೆಲ್ಪೀ ಕ್ಲಿಕ್ಕಿಸುತ್ತಿರುವ ಜನ ಇಲ್ಲಿ ಕಾಣಸಿಗುತ್ತೆ . ಭಾರತ ಸೇರಿದಂತೆ ಬೇರೆ ಬೇರೆ ದೇಶದ 40ಕ್ಕೂ ಹೆಚ್ಚು ಜಾತಿಯ ಮೀನುಗಳನ್ನೊಳಗೊಂಡ ಈ ಟನಲ್. ಎಂತಹವರನ್ನೂ ಸಹ ತನ್ನತ ಸೆಳೆದುಕೊಳ್ಳುವಷ್ಟು ಆಕರ್ಷಕವಾಗಿದೆ. ದುಬೈ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಅಂಡರ್ ವಾಟರ್ ಟನಲ್ ಗಳನ್ನ ನಿರ್ಮಾಣ ಮಾಡಿ, ಜಲಚರಗಳನ್ನು ಕಾಣಲು ಜನರಿಗೆ ಅವಕಾಶ ಮಾಡಿ ಕೊಡಲಾಗಿದೆಯೇನೋ ಅನ್ನುವಷ್ಟು ಅದ್ಭುತವಾಗಿದೆ.
ನಮ್ಮ ದೇಶದಲ್ಲಿ ಟನಲ್ ನಲ್ಲಿ ಹೋಗಿ ಜಲಚರಗಳನ್ನು ನೋಡುವುದು ಭಾರಿ ವಿರಳ. ಹಾಗಾಗಿ, ಭಾರತದಲ್ಲಿನ ಸಾಮಾನ್ಯ ಜನರಿಗೂ ಟನಲ್ ನಲ್ಲಿ ಜಲಚರಗಳು ಯಾವ ರೀತಿ ಕಾಣುತ್ತದೆ ಎಂಬುವುದನ್ನು ತೋರಸಲು, ದುಬೈ ಅಕ್ವಾರಿಯಂ ಎಂಡ್ ಟಿಂ ಶಿರಸಿ ಜಾತ್ರೆಯಲ್ಲಿ ಟೆಂಟ್ ಹಾಕಿದ್ದು, ಜನರು ಸಕತ್ ಎಂಜಾಯ್ ಮಾಡುತ್ತಿದ್ದಾರೆ.
ಇನ್ನು ಪ್ರತಿ ವರ್ಷ ಶಿರಸಿ ಜಾತ್ರೆಗೆ ಜೋಕಾಲಿ, ಸಿಹಿ ತಿಂಡಿಗಳೊಂದಿಗೆ ಜನ ಜಾತ್ರೆ ಎಂಜಾಯ್ ಮಾಡುತ್ತಿದ್ದ ಈ ಬಾರಿ ಜಾತ್ರಾರ್ಥಿಗಳು ದುಬೈ ಅಕ್ವೇರಿಯಂ ಕಂಡು ಸಕತ್ ಖುಷ್ ಆಗಿದ್ದಾರೆ. ನಾವು ಇದ್ದಲ್ಲಿಗೇ ದೇಶ ವಿದೇಶದ ಮೀನುಗಳು ಕಾಣಸಿಗುತ್ತಿದ್ದನ್ನು ತಿಳಿದು ಬೇಸಿಗೆ ರಜೆ ಹಿನ್ನೆಲೆ ಮಕ್ಕಳನ್ನು ಕರೆದುಕೊಂಡು ಕುಟುಂಬ ಸಮೇತ ದುಬೈ ಅಕ್ವೇರಿಯಂಗೆ ಬಂದು, ಬೇರೆ ಬೇರೆ ಜಾತಿಯ ಮೀನುಗಳನ್ನು ನೋಡುತ್ತಿದ್ದಾರೆ.
ಇನ್ನೂ ವಿಶೇಷ ಅಂದ್ರೆ ಇಲ್ಲಿ ಇರುವ ಕೆಲವು ಮೀನುಗಳ ಬೆಲೆ ತಲಾ 2 ರಿಂದ 3 ಲಕ್ಷದವರೆಗೆ ಇದೆ. ಆ ಮೀನುಗಳು ಮಾಂಸವನ್ನ ಸೇವನೆ ಮಾಡುತ್ತವೆ. ಅತಿ ದೊಡ್ಡ ಗಾತ್ರದಲ್ಲಿ ಬೆಳೆಯುವ ಮೀನುಗಳಾಗಿದ್ದು ಈ ಮೀನುಗಳು ತಿನ್ನಲು ಯೋಗ್ಯವಲ್ಲ. ಆದ್ರೆ ಅವುಗಳ ಗಾತ್ರ ಮತ್ತು ಚಲನವಲನ ಕಂಡು ಎಂತವರಿಗೂ ಖುಷಿ ಆಗುತ್ತೆ. ಚಿಕ್ಕ ಮಕ್ಕಳಿಗೆ ಕೊಂಚ ಭಯ ಆಗುತ್ತೆ.
ಒಟ್ಟಾರೆಯಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಲವತ್ತಕ್ಕೂ ಹೆಚ್ಚು ಜಾತಿಯ ಮೀನುಗಳು, ಅಂಡರ್ ವಾಟರ್ ನಲ್ಲಿ ನಾವೇ ಇರುವ ಫೀಲ್ ಆಗುವಂತೆ ಟನಲ್ ನಲ್ಲಿ ಅಕ್ವೇರಿಯಂ ನಿರ್ಮಾಣ ಮಾಡಿದ್ದು ಇಲ್ಲಿನ ಜನರಿಗೆ ಭಾರಿ ಖುಷಿ ನೀಡಿದೆ.