ಶಿರಸಿ, ಮಾರ್ಚ್ 24 : ದಕ್ಷಿಣ ಭಾರತದ ಅತಿದೊಡ್ಡ ಜಾತ್ರಾ ಮಹೋತ್ಸವಗಳ ಪೈಕಿ ಒಂದಾಗಿರುವ ಶಿರಸಿ ಮಾರಿಕಾಂಬಾ ಜಾತ್ರಾ ಮಹೋತ್ಸವ ಮಾರ್ಚ್ 19ರಿಂದ ಆರಂಭವಾಗಿದ್ದು, ಮಾರ್ಚ್ 27ರವರೆಗೆ ನಡೆಯಲಿದೆ. ಎರಡು ವರ್ಷಗಳಿಗೆ ಒಮ್ಮೆ ನಡೆಯುವ ಈ ಜಾತ್ರಾ ಮಹೋತ್ಸವಕ್ಕೆ ರಾಜ್ಯ, ಹೊರ ರಾಜ್ಯಗಳಿಂದ ಸಾಗರೋಪಾದಿಯಲ್ಲಿ ಭಕ್ತರ ದಂಡೇ ಹರಿದು ಬರ್ತಿದೆ…
ಶಿರಸಿಯ ಅಧಿದೇವತೆಯಾಗಿರುವ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ನಿಮಿತ್ತ ಇಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಅನಂತಕುಮಾರ ಹೆಗಡೆ, ತಮ್ಮ ಕುಟುಂಬ ಸಮೇತ ಆಗಮಿಸಿ ದೇವಿಯ ದರ್ಶನ ಪಡೆದರು..
ಅನಂತ್ ಕುಮಾರ್ ಹೆಗಡೆ ಮಾರಿಕಾಂಬಾ ದೇವಸ್ಥಾನಕ್ಕೆ ಬಂದ ಸುದ್ದಿ ಕೇಳಿ ಜನಜಂಗುಳಿಯೇ ಸೇರಿತ್ತು. ಇನ್ನು ಅನಂತ್ ಕುಮಾರ್ ಜೊತೆಗೆ ಅಪಾರ ಪ್ರಮಾಣದ ಬಿಜೆಪಿ ಕಾರ್ಯಕರ್ತರು ಜೊತೆಗಿದ್ರು. ದೇವಿ ದರ್ಶನ ಪಡೆದ ಹಿಂದೂ ಫೈರ್ ಬ್ರ್ಯಾಂಡ್ ಮೊಗ ಹಸನ್ಮುಖಿಯಾಗಿತ್ತು. ಇದು ಅನಂತ್ ಕುಮಾರ್ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ..
ಯಾಕಂದ್ರೆ ಉತ್ತರ ಕನ್ನಡ ಲೋಕಸಭಾ ಟಿಕೆಟ್ ಈ ಬಾರಿಯೂ ಅನಂತ್ ಕುಮಾರ್ ಹೆಗಡೆಯವರಿಗೆ ನೀಡೋದು ಖಚಿತ ಎನ್ನಲಾಗ್ತಿದೆ. ಇಂದು ಬಿಜೆಪಿ ಹೈಕಮಾಂಡ್ ಅನಂತ್ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಯಿದೆ.