ಅಂಕೋಲಾ ಮಾರ್ಚ್ 11 : ಉತ್ತರ ಕನ್ನಡ ಜಿಲ್ಲೆ ಸಂಸದರಾದ ಅನಂತ ಕುಮಾರ ಹೆಗಡೆ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರು ಹಾಗೂ ಕ್ಷೇತ್ರದ ಮಾಜಿ ಶಾಸಕರಾದ ಶ್ರೀಮತಿ ರೂಪಾಲಿ ಎಸ್ ನಾಯ್ಕ ಅವರ ಉಪಸ್ಥಿತಿಯಲ್ಲಿ ತಾಲೂಕಿನ ಬಿಜೆಪಿ ಕಾರ್ಯಾಲಯದಲ್ಲಿ ಮಾಹಾಶಕ್ತಿ ಕೇಂದ್ರದ ಸಭೆ ನಡೆಯಿತು.
ಸಭೆ ಉದ್ದೇಶಿಸಿ ರಾಜ್ಯ ಉಪಾಧ್ಯಕ್ಷರು ಹಾಗೂ ಕ್ಷೇತ್ರದ ಮಾಜಿ ಶಾಸಕರಾದ ಶ್ರೀಮತಿ ರೂಪಾಲಿ ಎಸ್ ನಾಯ್ಕ ಮಾತನಾಡಿ ಮುಂಬರುವ ಲೋಕಸಭಾ ಚುನಾವಣೆ ಸಿದ್ದತೆ ಬಗ್ಗೆ ತಿಳಿಸಿದರು. ಬಿಜೆಪಿ ಪ್ರಮುಖರು ಕಾರ್ಯಕರ್ತರು ಸೇರಿ ಪ್ರತಿ ಮನೆ ಮನೆಗೆ ಹೋಗಿ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪ್ರತಿ ಯೋಜನೆ ಹಾಗೂ ಅಭಿವೃದ್ಧಿಯ ಬಗ್ಗೆ ತಿಳಿಸಬೇಕು. ನಾವೆಲ್ಲ ಸೇರಿ ಮೋದಿಜೀ ಅವರನ್ನೇ ಮತ್ತೊಮ್ಮೆ ದೇಶದ ಪ್ರಧಾನಿಯಾಗಿ ಆಯ್ಕೆ ಮಾಡೋಣ ಎಂದರು.
ಅನಂತ ಕುಮಾರ ಹೆಗಡೆ ಅವರು ಕಾರ್ಯಕ್ರಮ ಉದ್ದೇಶಿಸಿ ವಿಕಸಿತ ಭಾರತ ಯಾತ್ರೆ ಬಗ್ಗೆ ಹಾಗೂ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಬಿಜೆಪಿಯನ್ನಾಗಿ ಬದಲಾಯಿಸೋಣ. ಮತ್ತೊಮ್ಮೆ ಮೋದಿಜೀ ಅವರನ್ನು ಪ್ರಧಾನಿಯನ್ನಾಗಿಸೊಣ ಎಂದು ಹೇಳಿದ್ರು..
ಈ ಸಂದರ್ಭದಲ್ಲಿ ಬಿಜೆಪಿ ಅಂಕೋಲಾ ಮಂಡಲ ಅಧ್ಯಕ್ಷರಾದ ಗೋಪಾಲ ಕೃಷ್ಣ ವೈದ್ಯ ಹಾಗೂ ರಾಜೇಂದ್ರ ನಾಯ್ಕ ಸಭೆ ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಚಂದ್ರು ಎಸಳೆ, ನಿತ್ಯಾನಂದ ಗಾಂವಕರ, ಜಗದೀಶ ನಾಯಕ ಮೊಗಟಾ, ಪ್ರಶಾಂತ ನಾಯಕ, ವೇದಿಕೆಯಲ್ಲಿದ್ದರು . ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ನಾಯ್ಕ, ಶ್ರೀಧರ ನಾಯ್ಕ, ಕೃಷ್ಣ ಕುಮಾರ ಮಹಾಲೆ, ನಾಗೇಂದ್ರ ನಾಯ್ಕ, ನಾಗೇಶ ಕಿಣಿ, ರಾಜೇಶ್ವರಿ ಕೇಣಿಕರ್, ಪ್ರವೀಣ ನಾಯ್ಕ, ವಿಶ್ವನಾಥ ನಾಯ್ಕ, ಜಯಾ ನಾಯ್ಕ, ತಾರಾ ಗಾಂವಕರ್, ತಾರಾ ನಾಯ್ಕ, ಸುರಕ್ಷಾ ಬೋವಿ ಹಾಗೂ ಜಿಲ್ಲಾ ಪ್ರಮುಖರು, ಮಹಾಶಕ್ತಿ ಕೇಂದ್ರ, ಶಕ್ತಿಕೇಂದ್ರದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿಕಸಿತ ಭಾರತ ಹಾಗೂ ಪ್ರಧಾನಿ ಮೋದಿಯವರ ಸಾಧನೆಯ ಕುರಿತು ಜಿಲ್ಲೆಯಲ್ಲಿ ಸಾಗುವ ವಾಹನಕ್ಕೆ ಚಾಲನೆ ನೀಡಲಾಯಿತು. ಈ ಸಭೆಯಲ್ಲಿ ಬಿಜೆಪಿ ಪ್ರಮುಖರಾದ ಸಂಜಯ ನಾಯ್ಕ ಪ್ರಾಸ್ತವಿಕವಾಗಿ ಮಾತನಾಡಿದರು. ಹಾಗೂ ಶಶಾಂಕ ಹೆಗಡೆ ಸ್ವಾಗತಿಸಿ ವಂದಿಸಿದರು.