ಮಹಿಳಾ ಶಕ್ತಿ ಸೀಬರ್ಡ್‌ ನಿರಾಶ್ರಿತರ ಮತ್ತು ಕಟ್ಟಡ ಕೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಯೂನಿಯನ್‌ ಉದ್ಘಾಟಿಸಿದ ಶ್ರೀಮತಿ ರೂಪಾಲಿ ಎಸ್.ನಾಯ್ಕ

ಕಾರವಾರ ಮಾರ್ಚ್‌ 11 : ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀಮತಿ ರೂಪಾಲಿ ಎಸ್‌ ನಾಯ್ಕ ಕಾರವಾರದ ಐಸ್‌ ಪ್ಯಾಕ್ಟರಿ ಚೆಂಡಿಯಾದಲ್ಲಿರುವ ಮಹಿಳಾ ಶಕ್ತಿ ಸ್ಥಳೀಯ ಸೀಬರ್ಡ್‌ ನಿರಾಶ್ರಿತರ ಮತ್ತು ಕಟ್ಟಡ ಕೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಯೂನಿಯನ್‌ ಅನ್ನು ಉದ್ಘಾಟಿಸಿ ಶುಭಹಾರೈಸಿದ್ರು…  

ಸ್ಥಳೀಯ ಮಹಿಳೆಯರಿಗೆ ಅನುಕೂಲವಾಗಲು ಮಾಡಿರುವ  ಈ ಯೂನಿಯನ್‌ಗೆ ಶುಭವಾಗಲಿ. ಈ ಯೂನಿಯನ್‌ಗೆ ನನ್ನ ಸಹಕಾರ ಸದಾ ಇರುತ್ತದೆ. ದೇಶಕ್ಕೆ ತಾಯಂದಿರ ಶಕ್ತಿಯೇ ಮೇಲು. ಭಾರತ ಮಾತೆಯನ್ನು ಪೂಜಿಸುವ ಮತ್ತು ಗೌರವಿಸುವ ಸಂಸ್ಕೃತಿ ನಮ್ಮದು. ಸಂಘದಲ್ಲಿ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು. ಅದೆಷ್ಟೋ ಕುಟುಂಬಗಳನ್ನು ಮಹಿಳೆಯರೇ ನಿರ್ವಹಣೆ ಮಾಡುತ್ತಿದ್ದಾರೆ. ದುಡಿದ ಹಣವನ್ನು ಕೂಡಿಡುವ ಮೂಲಕ ಕಷ್ಟ ಕಾಲದಲ್ಲಿ ಆ ಹಣ ನೆರವಾಗುತ್ತದೆ. ಕೇವಲ ಸಾಲ ಪಡೆಯುವುದಕ್ಕೆ ಸಂಘ ಬಳಕೆಯಾಗಬಾರದು. ವಿವಿಧ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಂಘವನ್ನು ಬೆಳೆಸಬಹುದು. ಹಣವನ್ನು ಉಳಿತಾಯ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರಿಗೆ ಅನುಕೂಲವಾಗುವ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದು ಹೇಳಿದ್ರು…

ಈ ವೇಳೆ ಯೂನಿಯನ್‌ ವತಿಯಿಂದ ಶ್ರೀಮತಿ ರೂಪಾಲಿ ಎಸ್.‌ ನಾಯ್ಕ ಅವರಿಗೆ ಗೌರವಿಸಿ ಸನ್ಮಾನಿಸಲಾಯ್ತು…

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಪೂಜಾ ನಾಯ್ಕ, ಉಪಾಧ್ಯಕ್ಷರಾದ ಜೋಗಿ ಗುನಗಿ, ಯೂನಿಯನ್‌ ಪ್ರಮುಖರಾದ ಶ್ರೀಮತಿ ಜ್ಯೋತಿ ತಳೇಕರ, ಶ್ರೀಮತಿ ಸಾಧನಾ ತಳೇಕರ, ಶ್ರೀಮತಿ ಅನಸೂಯ ತಳೇಕರ, ಉತ್ತರಕನ್ನಡ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತಾ ಬಾಂದೇಕರ, ಗ್ರಾ.ಪಂ ಸದಸ್ಯರಾದ ಜಿತೇಶ್‌ ಅರ್ಗೇಕರ, ಆನಂದು ಗಾಂವಕರ, ಶ್ರೀಮತಿ ಕಲ್ಪನಾ ನಾಯ್ಕ, ಶ್ರೀಮತಿ ದೀಪಾ ಆಗೇರ, ಅಮದಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಶ್ರಿಮತಿ ಆಶಾ ನಾಯ್ಕ, ಚೆಂಡಿಯಾ ಮಹಾಶಕ್ತಿ ಕೇಂದ್ರದ ಶ್ರೀ ಸತೀಶ ತಳೇಕರ, ಯೂನಿಯನ್ ಕಾರ್ಯದರ್ಶಿ, ಸದಸ್ಯರು, ಪಂಚಾಯತ ಅಭಿವೃದ್ಧಿ ಅಧಿಕಾರಿ, ಕೆನರಾ ಬ್ಯಾಂಕ್ ‌ಅಧಿಕಾರಿ ಸಾರ್ವಜನಿಕರು ಉಪಸ್ಥಿತರಿದ್ದರು.