ಬೆಂಗಳೂರು ಮಾರ್ಚ್ 9 : ‘ಅಬ್ ಕಿ ಬಾರ್, ಎನ್ಡಿಎ ಸರ್ಕಾರ್, 400 ಪಾರ್…’ ಎಂಬ ಪ್ರಧಾನಿ ನರೇಂದ್ರ ಮೋದಿಯವರ ವಿಶ್ವಾಸದಂತೆಯೇ ಮುಂಬರುವ 2024 ರ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಎನ್ಡಿಎ ಮೈತ್ರಿಕೂಟವು ಪ್ರಚಂಡ ವಿಜಯಕ್ಕೆ ಸಾಕ್ಷಿಯಾಗಲಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ಮೋದಿ (Narendra Modi) ನೇತೃತ್ವದ ಎನ್ಡಿಎ (NDA) ಬಣ 400 ಸ್ಥಾನಗಳ ಗುರಿ ಹೊಂದಿದ್ದರೂ ಅದನ್ನು ಮೀರುವುದಿಲ್ಲ. ಆದರೆ, ಸಮೀಪವೇ ಇರಲಿದೆ ಎಂಬುದಾಗಿ ಸಮೀಕ್ಷೆ ಹೇಳಿದೆ. ಇದೇ ವೇಳೆ ಇಂಡಿಯಾ (INDIA BLOC) ಬ್ಲಾಕ್ನ ಪಕ್ಷಗಳು ಸುಮಾರು 110 ರಿಂದ 130 ಸ್ಥಾನಗಳಿಗೆ ತೃಪ್ತಿಪಡಬೇಕಾಗುತ್ತದೆ ಎಂದು ಹೇಳಿದೆ.
ಟಿಎನ್-ಇಟಿಜಿ ರಿಸರ್ಚ್ (TN=ETG Research) ಪ್ರಕಾರ, ಎನ್ಡಿಎ 358-398 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಇಂಡಿಯಾ ಬ್ಲಾಕ್ ಸುಮಾರು 110-130 ಸ್ಥಾನಗಳನ್ನು ಪಡೆಯಬಹುದು ಎಂದು ಹೇಳಲಾಗಿದೆ. ವೈಎಸ್ಆರ್ಪಿ 21ರಿಂದ 22, ಬಿಜೆಡಿ 10ರಿಂದ 11 ಮತ್ತು ಇತರರು 11ರಿಂದ15 ಸ್ಥಾನಗಳನ್ನು ಪಡೆಯಲಿದ್ದಾರೆ ಎಂದು ವರದಿ ಹೇಳಿದೆ.
ಕಾಂಗ್ರೆಸ್, ಟಿಎಂಸಿ, ಎಎಪಿಗೆ ಆಘಾತ ಗ್ಯಾರಂಟಿ
ಮತ್ತೊಂದು ಸಮೀಕ್ಷೆಯ ಪ್ರಕಾರ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಗೆಲ್ಲುವುದರ ಹೊರತಾಗಿ, ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳಾದ ಟಿಎಂಸಿ, ಎಎಪಿ ಮತ್ತು ಇತರರಿಗೆ ಆಘಾತ ನೀಡಲಿದೆ. ಸಮೀಕ್ಷೆಯ ಪ್ರಕಾರ, ಬಿಜೆಪಿ 333 ರಿಂದ 363 ಸ್ಥಾನಗಳನ್ನು ಗೆದ್ದರೆ ಕಾಂಗ್ರೆಸ್ ಸುಮಾರು 28 ರಿಂದ 48 ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ.
ಎನ್ಡಿಎ ಮತ್ತು ಬಿಜೆಪಿಗೆ ಹಿಂದಿ ಹೃದಯಭಾಗದಲ್ಲಿ ಪ್ರಮುಖ ಮತ ಬ್ಯಾಂಕ್ ಹೊಂದಿದೆ. ಆದರೆ ಕರ್ನಾಟಕ, ಕೇರಳ, ಬಂಗಾಳ, ಒಡಿಶಾ ಮತ್ತು ಇತರ ರಾಜ್ಯಗಳಲ್ಲಿ ಅದಕ್ಕೆ ಹೆಚ್ಚು ಅನುಕೂಲಗಳು ಇಲ್ಲ. ವಿಧಾನಸಭಾ ಚುನಾವಣಾ ಪ್ರಕಾರ ಬಿಜೆಪಿ 12 ರಾಜ್ಯಗಳಲ್ಲಿ ಸ್ವಂತವಾಗಿ ಅಧಿಕಾರದಲ್ಲಿದೆ. ಆದರೆ ಎರಡನೇ ಅತಿದೊಡ್ಡ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಕೇವಲ 3 ರಾಜ್ಯಗಳಲ್ಲಿ ಅಧಿಕಾರ ಹೊಂದಿದೆ. ದೆಹಲಿ ಮತ್ತು ಪಂಜಾಬ್ನಲ್ಲಿ ಸರ್ಕಾರ ಹೊಂದಿರುವ ಆಮ್ ಆದ್ಮಿ ಪಕ್ಷವು ರಾಷ್ಟ್ರೀಯ ಪಕ್ಷಗಳಲ್ಲಿ ಮೂರನೇ ಸ್ಥಾನದಲ್ಲಿದೆ.
ರಾಜಸ್ಥಾನ, ಛತ್ತೀಸ್ ಗಢ, ಉತ್ತರಾಖಂಡ, ಹರಿಯಾಣ, ಉತ್ತರ ಪ್ರದೇಶ, ಗುಜರಾತ್, ಗೋವಾ, ಅಸ್ಸಾಂ, ತ್ರಿಪುರ, ಮಣಿಪುರ, ಅರುಣಾಚಲ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರ ಹೊಂದಿದೆ. ಏಪ್ರಿಲ್-ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಆದರೆ ದಿನಾಂಕಗಳನ್ನು ಇನ್ನೂ ಘೋಷಿಸಲಾಗಿಲ್ಲ.