ಉತ್ತರ ಕನ್ನಡ ಜಿಲ್ಲೆಯ ಸುಪ್ರಸಿದ್ದ ಪ್ರವಾಸಿ ಕ್ಷೇತ್ರ ಯಾಣದಲ್ಲಿ ದೇಶದ ಮೊಟ್ಟಮೊದಲ ಸಾರ್ವಜನಿಕ ವೈಫೈ 7 ಸೇವೆಯನ್ನು ಸಂಸದ ಅನಂತ ಕುಮಾರ್ ಹೆಗಡೆ ಲೋಕಾರ್ಪಣೆಗೊಳಿಸಿದ್ರು.
ಕುಮಟಾ ಮಾರ್ಚ್ 8 : ಉತ್ತರ ಕನ್ನಡ ಜಿಲ್ಲೆಯ ಸುಪ್ರಸಿದ್ದ ಪ್ರವಾಸಿ ಕ್ಷೇತ್ರ ಯಾಣದಲ್ಲಿ ದೇಶದ ಮೊಟ್ಟಮೊದಲ ಸಾರ್ವಜನಿಕ ವೈಫೈ 7 ಸೇವೆಯನ್ನು ಸಂಸದ ಅನಂತ ಕುಮಾರ್ ಹೆಗಡೆ ಲೋಕಾರ್ಪಣೆಗೊಳಿಸಿದ್ರು… ಇದಕ್ಕೂ ಮುನ್ನ ಸಂಸದರು ಯಾಣದ ಭೈರವೇಶ್ವರನ ದರ್ಶನ ಪಡೆದು ಪೂಜೆ ಸಲ್ಲಿಸಿದ್ರು…
ಬಳಿಕ ಮಾತನಾಡಿದ ಅನಂತಕುಮಾರ್ ಹೆಗಡೆ, ವೈಫೈ 7 ಅನ್ನುವುದು ಜಪಾನ್ ತಂತ್ರಜ್ಞಾನವಾಗಿದ್ದು, ಇದೇ ಮೊದಲ ಬಾರಿಗೆ ದೇಶದಲ್ಲಿ ಪರಿಚಯಿಸಲಾಗುತ್ತಿದೆ. ಶಿವರಾತ್ರಿಯ ಸಂದರ್ಭದಲ್ಲಿ ಇಡೀ ದೇಶದಲ್ಲಿ ಮೊದಲ ಬಾರಿಗೆ ವೈಫೈ 7 ಯಾಣದಲ್ಲಿ ಲೋಕಾರ್ಪಣೆಗೊಂಡಿದ್ದು, ಹೆಮ್ಮೆಯ ಸಂಗತಿ. ಈ ಸೇವೆಯ ವಿಶೇಷತೆ ಎಂದರೆ, ನೆಟ್ವರ್ಕ್ ಇಲ್ಲದಿದ್ದರೂ ನೆಟ್ವರ್ಕ್ ಲಭಿಸುತ್ತದೆ. ನಾರ್ಮಲ್ ಕರೆಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಮುಂದಿನ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ವಿಸ್ತರಿಸಲಾಗುವುದು. ಇದೊಂದು ಐತಿಹಾಸಿಕ ಕ್ಷಣ ಎಂದು ಹೇಳಿದರು..
ಒಟ್ಟಿನಲ್ಲಿ ಪ್ರಸಿದ್ಧ ಪ್ರವಾಸೀ ತಾಣವಾಗಿದ್ದ ಯಾಣದಲ್ಲಿ, ಇದೀಗ ಜಪಾನ್ ದೇಶದ ಹೊಸ ತಂತ್ರಜ್ಞಾನ ವೈಫೈ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಲೋಕಾರ್ಪಣೆಗೊಂಡಿದೆ. ಈ ವೇಳೆ ಕಾರ್ಯಕ್ರಮದಲ್ಲಿ ಬಿಎಸ್‌ಎನ್‌ಎಲ್ ಅಧಿಕಾರಿಗಳು, ಬೆಸ್ಕಾಂ, ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಜಪಾನ್ ದೇಶದ ತಂತ್ರಜ್ಞರು ಉಪಸ್ಥಿತರಿದ್ದರು.