ಬೆಂಗಳೂರು: ಕಾರು, ವಾಷಿಂಗ್, ಗಾರ್ಡನ್​ಗೆ ನೀರು ಬಳಕೆ ಮಾಡಿದರೆ 5 ಸಾವಿರ ರೂ. ದಂಡ

ಬೆಂಗಳೂರು ನಗರದಲ್ಲಿ ಜಲಕ್ಷಾಮ ಎದುರಾಗಿದ್ದು, ಹನಿ ನೀರಿಗೂ ಹಾಹಾಕಾರ ಎದ್ದಿದೆ. ಹೀಗಾಗಿ ಎಚ್ಚೆತ್ತುಕೊಂಡಿರುವ ಬಿಡಬ್ಲ್ಯುಎಸ್​ಎಸ್​ಬಿ, ನೀರಿನ ದುರ್ಬಳಕೆ ತಡೆಗಟ್ಟಲು ಮುಂದಾಗಿದೆ. ಸಾರ್ವಜನಿಕರು ಕುಡಿಯುವ ನೀರು ಮಿತವಾಗಿ ಬಳಸುವಂತೆ ಸೂಚನೆ ನೀಡಿದ BWSSB, ಮನೋರಂಜಕವಾಗಿ ಅಥವಾ ಆಕರ್ಷಕ ವ್ಯವಸ್ಥೆಗೆ ಅಥವಾ ವಾಹನ ತೊಳೆಯಲು ಇತ್ಯಾದಿಗಳಿಗೆ ಬಳಕೆ ಮಾಡಿದರೆ ಐದು ಸಾವಿರ ರೂಪಾಯಿ ದಂಡ ವಿಧಿಸುವ ಎಚ್ಚರಿಕೆ ನೀಡಿದೆ.

ಬೆಂಗಳೂರು, ಮಾ.8: ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಜಲಕ್ಷಾಮ ಎದುರಾಗಿದ್ದು, ಹನಿ ನೀರಿಗೂ ಹಾಹಾಕಾರ ಎದ್ದಿದೆ. ಹೀಗಾಗಿ ಎಚ್ಚೆತ್ತುಕೊಂಡಿರುವ ಬಿಡಬ್ಲ್ಯುಎಸ್​ಎಸ್​ಬಿ, ನೀರಿನ ದುರ್ಬಳಕೆ (Water Misus) ತಡೆಗಟ್ಟಲು ಮುಂದಾಗಿದೆ. ಸಾರ್ವಜನಿಕರು ಕುಡಿಯುವ ನೀರು ಮಿತವಾಗಿ ಬಳಸುವಂತೆ ಸೂಚನೆ ನೀಡಿದ BWSSB, ಮನೋರಂಜಕವಾಗಿ ಅಥವಾ ಆಕರ್ಷಕ ವ್ಯವಸ್ಥೆಗೆ ಅಥವಾ ವಾಹನ ತೊಳೆಯಲು ಇತ್ಯಾದಿಗಳಿಗೆ ಬಳಕೆ ಮಾಡಿದರೆ ಐದು ಸಾವಿರ ರೂಪಾಯಿ ದಂಡ ವಿಧಿಸುವ ಎಚ್ಚರಿಕೆ ನೀಡಿದೆ.

ಬೆಂಗಳೂರಿನಲ್ಲಿ ನೀರು ವ್ಯರ್ಥವಾಗುವುದನ್ನು ತಡೆಗಟ್ಟಲು ಮುಂದಾದ BWSSB, ಸಾರ್ವಜನಿಕರು ಕುಡಿಯುವ ನೀರು ಮಿತವಾಗಿ ಬಳಸುವಂತೆ ಸೂಚನೆ ನೀಡಿದೆ. ಕುಡಿಯುವ ನೀರನ್ನು ವಾಹನಗಳ ಸ್ವಚ್ಛತೆಗೆ, ಕೈದೋಟ, ಕಟ್ಟಡ ನಿರ್ಮಾಣ, ಮನೋರಂಜಕವಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ ಹಾಗೂ ಸಿನಿಮಾ‌ ಥಿಯೇಟರ್, ಮಾಲುಗಳಲ್ಲಿ ಬಳಸಿದರೆ 5 ಸಾವಿರ ರೂಪಾಯಿ ದಂಡ ವಿಧಿಸುವ ಎಚ್ಚರಿಕೆ ನೀಡಿದೆ.

ಜಲಮಂಡಳಿ ಕಾಯ್ದೆ 194 ಕಲಂ 109 ರಂತೆ 5 ಸಾವಿರ ರೂಪಾಯಿ ದಂಡ ವಿಧಿಸಲು ನಿರ್ಧರಿಸಲಾಗಿದೆ. ಉಲ್ಲಂಘನೆ ಮರುಕಳಿಸಿದರೆ 5 ಸಾವಿರ ದಂಡದ ಜೊತೆಗೆ ದಿನಪ್ರತಿ 500 ರೂಪಾಯಿ ಹೆಚ್ಚುವರಿ ದಂಡ ವಸೂಲಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ತಿಪ್ಪೇನಹಳ್ಳಿಯಲ್ಲಿ ಜಲಕ್ಷಾಮ
ಸಿಲಿಕಾನ್ ಸಿಟಿ ಜನರಿಗೆ ಜಲಾಘಾತ ತಪ್ಪುತ್ತಿಲ್ಲ. ಯಶವಂತಪುರ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ತಿಪ್ಪೇನಹಳ್ಳಿಯಲ್ಲಿ ಜಲಕ್ಷಾಮ ಎದುರಾಗಿದ್ದು, ನಿವಾಸಿಗಳು ನೀರಿಲ್ಲದೇ ಕಂಗಾಲಾಗಿದ್ದಾರೆ. ದೊಡ್ಡಬಿದರುಕಲ್ಲು ವಾರ್ಡ್ ವ್ಯಾಪ್ತಿಯಲ್ಲಿರುವ ತಿಪ್ಪೇನಹಳ್ಳಿಯಲ್ಲಿ ವಾರಕ್ಕೊ,15 ದಿನಕ್ಕೊಮ್ಮೆ ನೀರು ಬರುತ್ತಿದ್ದು, ನೀರಿಗಾಗಿ ಕಾಯುವುದೇ ದೊಡ್ಡ ಕೆಲಸವಾಗಿದೆ.

ಊರಿನ ಬೋರ್ ವೆಲ್​ಗಳು ಕೂಡ ಬತ್ತಿ ಹೋಗಿವೆ. ನೀರಿಗಾಗಿ ಕಾದು ಕಾದು ಜನರು ಸುಸ್ತಾಗಿದ್ದಾರೆ. ಹಬ್ಬದ ದಿನವೂ ನೀರಿಲ್ಲದೇ ಬಸವಳಿದ ಜನರು, ನೀರಿಗಾಗಿ ಬಿಂದಿಗೆ ಹಿಡಿದು ಆಕ್ರೋಶ ಹೊರಹಾಕಿದ್ದಾರೆ.