ಅಂಕೋಲಾ : 2024ಕ್ಕೆ ಮತ್ತೊಮ್ಮೆ ಮೋದಿ ಸರ್ಕಾರ ಎಂಬ ಲೋಕಸಭಾ ಚುನಾವಣೆಯ ಗೋಡೆ ಬರಹ ಅಭಿಯಾನ ಉತ್ತರ ಕನ್ನಡ ಜಿಲ್ಲೆಯಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಸೋಮವಾರ ಅಂಕೋಲಾ ನಗರದ ಹೊನ್ನಕೇರಿ ಭೂತ್ ನಂ.199ರಲ್ಲಿ “2024 ಮತ್ತೊಮ್ಮೆ ಮೋದಿ ಸರ್ಕಾರ” ಗೋಡೆ ಬರಹಕ್ಕೆ ಗೋಡೆ ಬರಹ ಅಭಿಯಾನದ ಜಿಲ್ಲಾ ಸಂಚಾಲಕ ರಾಜೇಂದ್ರ.ವಿ.ನಾಯ್ಕ ಚಾಲನೆ ನೀಡಿದರು.
ಈ ವೇಳೆ ಹೊನ್ನೆಕೇರಿ ಭೂತ ಅಧ್ಯಕ್ಷ ಸುಭಾಷ ಜಿ.ನಾಯ್ಕ ನೇತೃತ್ವದಲ್ಲಿ ಶ್ರೀಮತಿ ಕುಂದಾ ಎಲ್. ನಾಯ್ಕ, ಶ್ರೀಮತಿ ಸೀಮಾ ಡಿ ಬಂಟ, ದೀಪಕ ನಾಯ್ಕ, ಮಹೇಶ ನಾಯ್ಕ, ಗೌರೀಶ ನಾಯ್ಕ, ಪ್ರಸಾದ ನಾಯ್ಕ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು…