ಹೊಸದಿಲ್ಲಿ : ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ವಿನೋದ್ ತಾವ್ಡೆ ಅವರು ದಿಲ್ಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.
16 ರಾಜ್ಯ, 2 ಕೇಂದ್ರಾಡಳಿತ ಪ್ರದೇಶಗಳ ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. 34 ಸಚಿವರನ್ನು ಲೋಕಸಭಾ ಚುನಾವಣೆಗೆ ಕಣಕ್ಕಿಳಿಸಲಾಗಿದೆ. ಇಬ್ಬರು ಮಾಜಿ ಸಿಎಂಗಳನ್ನು ಕೂಡ ಕಣಕ್ಕಿಳಿಸಲಾಗಿದೆ.
ಉತ್ತರ ಪ್ರದೇಶದ ವಾರಾಣಸಿಯಿಂದ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಸ್ಪರ್ಧೆ ಮಾಡಲಿದ್ದಾರೆ. ಅಮಿತ್ ಶಾ ಗುಜರಾತ್‌ನ ಗಾಂಧಿ ನಗರದಿಂದ ಸ್ಪರ್ಧಿಸಲಿದ್ದಾರೆ. ಪಟ್ಟಿಯಲ್ಲಿ 28 ಮಹಿಳೆಯರು, 50 ವರ್ಷಕ್ಕಿಂತ ಕೆಳಗಿನ ವಯಸ್ಸು ಹೊಂದಿದ 47, ಒಬಿಸಿ ಸಮುದಾಯಕ್ಕೆ ಸೇರಿ 57 ಜನರಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡಲಾಗಿದೆ. ಪ್ರಮುಖವಾಗಿ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಪುತ್ರಿ ಬನ್ಸೂರಿ ಸ್ವರಾಜ್‌ಗೆ ಟಿಕೆಟ್ ನೀಡಲಾಗಿದ್ದು, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಕೇರಳದ ತಿರುವನಂತಪುರಂನಿಂದ ಕಣಕ್ಕಿಳಿಯಲಿದ್ದಾರೆ.
ಬಿಜೆಪಿ ಬಿಡುಗಡೆಗೊಳಿಸಿದ ಮೊದಲ ಪಟ್ಟಿ ಇಂತಿದೆ..
ಈಶಾನ್ಯ ದೆಹಲಿ – ಮನೋಜ್ ತಿವಾರಿ
ಹೊಸದಿಲ್ಲಿ- ಬನ್ಸುರಿ ಸ್ವರಾಜ್
ಪಶ್ಚಿಮ ದೆಹಲಿ – ಕಮಲ್‌ಜೀತ್ ಸೆಹ್ರಾವತ್
ದಕ್ಷಿಣ ದೆಹಲಿ – ರಾಮ್‌ವೀರ್ ಸಿಂಗ್ ಬಿಧುರಿ
ದೆಹಲಿ ಚಾಂದಿನಿ ಚೌಕ್ – ಪ್ರವೀಣ್ ಖಂಡೇಲ್ವಾಲ್
ಜಹೀರಾಬಾದ್ – ಬಿಬಿ ಪಾಟೀಲ್
ನಾಗರ್‌ಕುರೂಲ್ – ಭರತ್
ಕರೀಂನಗರ – ಬಂಡಿ ಸಂಜಯ್
ನಿಜಾಮಾಬಾದ್ – ಡಿ ಅರವಿಂದ್
ಸಿಕಂದರಾಬಾದ್ – ಕಿಶನ್ ರೆಡ್ಡಿ
ಚೇವೆಲ್ಲಾ – ಕೊಂಡ ವಿಶ್ವೇಶ್ವರ್ ರೆಡ್ಡಿ
ಭೋಂಗೀರ್ – ಬೊರ್ರಾ ನರಸಯ್ಯಗೌಡ
ಮಲ್ಕಾಜಿಗಿರಿ- ಈಟೇಲ ರಾಜೇಂದರ್
ಹೈದರಾಬಾದ್ – ಡಾ. ಮಾಧವಿ ಲತಾ