ಕಾರವಾರ:-ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಗೃಹಜ್ಯೋತಿ ಯೋಜನೆಯನ್ನು ಈಗಾಗಲೇ ಚಾಲನೆಗೊಂಡಿದ್ದು, ಶೇ.15 ರಷ್ಟು ಗ್ರಾಹಕರು ಗೃಹಜ್ಯೋತಿ ನೋಂದಣಿಯನ್ನು ಮಾಡಿಕೊಂಡಿರುವುದಿಲ್ಲ. ಅಂತಹ ಗ್ರಾಹಕರು ಗೃಹಜ್ಯೋತಿ ನೋಂದಣಿಗೆ ಕಾರವಾರ ಉಪವಿಭಾಗೀಯ ಕಚೇರಿಗೆ ಭೇಟಿ ಕೊಟ್ಟು, ಅವರ ವಿದ್ಯುತ್ ಬಿಲ್, ಆಧಾರ್ ಕಾರ್ಡ್ ಹಾಗೂ ಆಧಾರ್ ಲಿಂಕ್‌ಗೊAಡಿರುವ ಮೊಬೈಲ್ ನ್ನು ಕಡ್ಡಾಯವಾಗಿ ತಂದು ಮಾಡಿಸಿಕೊಳ್ಳುವಂತೆ ಹು.ವಿ.ಸ.ಕಂ.ನಿ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.