ಜಿಲ್ಲಾಡಳಿತದ ಮೂಲಕ ಶ್ರಧ್ದಾ,ಭಕ್ತಿಯ ಮಹಾ ಶಿವರಾತ್ರಿ ಆಚರಣೆ

ಕಾರವಾರ:- ಜಿಲ್ಲಾಡಳಿತ ಮತ್ತು ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಉತ್ತರ ಕನ್ನಡವತಿಯಿಂದ ಮಾರ್ಚ್ 8 ರಂದು ನಡೆಯುವ ಮಹಾಶಿವರಾತ್ರಿ ಆಚರಣೆಯನ್ನು ಮುರುಡೇಶ್ವರದಲ್ಲಿ ಅತ್ಯಂತ ಶ್ರದ್ಧಾ ಮತ್ತು ಭಕ್ತ್ತಿ ಭಾವದಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.

ಮಾರ್ಚ್ 8 ರಂದು ರಾತ್ರಿ 8 ಗಂಟೆಯಿAದ ಮರುದಿನ ಬೆಳಗ್ಗೆ 5 ಗಂಟೆಯವರೆಗೆ ಮಹಾಶಿವರಾತ್ರಿ ಜಾಗರಣೆ ಪ್ರಯುಕ್ತ ಮುರುಡೇಶ್ವರದ ಕಡಲ ಕಿನಾರೆ ಬಳಿ, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಕಲಾವಿದರಿಂದ ಶಿವನಿಗೆ ಸಂಬAದಿಸಿದ ವಿವಿಧ ಭಕ್ತಿ ಪೂರ್ವಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ಭರತನಾಟ್ಯ, ಕಥಕ್ಕಳಿ, ಒಡಿಸ್ಸಿ ನೃತ್ಯಗಾರರು ಆಗಮಿಸಲಿದ್ದು, ಶಿವತಾಂಡವ, ಶಿವ ಪುರಾಣ, ಶಿವಲೀಲೆ ನೃತ್ಯ ಕಾರ್ಯಕ್ರಮಗಳು ಹಾಗೂ ಶಿವನಿಗೆ ಸಂಬAದಿಸಿದ ಭಕ್ತಿ ಗೀತೆಗಳು ಹಾಗೂ ವಾದ್ಯ ಕಾರ್ಯಕ್ರಮಗಳು ನಡೆಯಲಿದೆ ಎಂದರು.

ಮಾರ್ಚ್ 8 ರಂದು ನಡೆಯುವ ಈ ಅಭೂತಪೂರ್ವ ಭಕ್ತಿ ಪೂರ್ವಕವಾದ ಕಾರ್ಯಕ್ರಮಗಳಿಗೆ ಜಿಲ್ಲೆಯ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ, ಮಹಾಶಿವರಾತ್ರಿಯ ಜಾಗರಣೆಯ ಅರ್ಥಪೂರ್ಣವಾದ ಈ ಭಕ್ತಿ ಭಾವದಲ್ಲಿ ಪರಶಿವನ ಧ್ಯಾನದಲ್ಲಿ ತಲ್ಲಿನರಾಗುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.

ಈ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಇಚ್ಚಿಸುವ ಕಲಾವಿದರು ಮತ್ತು ಕಲಾತಂಡಗಳು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜಯಂತ್ ಅವರನ್ನು ಮೊ.ಸಂ. 85536 29978 ರಲ್ಲಿ ಸಂಪರ್ಕಿಸುವAತೆ ತಿಳಿಸಿದ್ದಾರೆ.