ಶ್ರೀ ಜಿ ಎನ್ ಹೆಗಡೆ ಟ್ರಸ್ಟ್(ರಿ) ನ ಗೋರೆಯ ಕೆನರಾ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ಜೆ ಇ ಇ ಮೈನ್ಸ್‌ನ ಪ್ರಥಮ ಚರಣದಲ್ಲಿ 90ಕ್ಕೂ ಅಧಿಕ ಅಂಕ ಪಡೆದು ಅಭೂತಪೂರ್ವ ಸಾಧನೆಗೈದಿದ್ದಾರೆ. ಕುಮಾರ್ ಎಸ್ ಭಟ್ ಅತ್ಯುನ್ನತ 99.31 % (ಭೌತಶಾಸ್ತ್ರ 99.34, ರಸಾಯನಶಾಸ್ತ್ರ 99.49 ಗಣಿತಶಾಸ್ತ್ರ 98.48) ನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಅಂತಯೇ ಚಿನ್ಮಯ್ ವಿ ಭಟ್(95.92 %), ದಿಶಾ ಡಿ ಮಾಸ್ತಿಕಟ್ಟಾ (94.51 %), ನಂದನ್ ಜಿ ಹೆಗಡೆ (94.13 %), ಕಾರ್ತಿಕ್ ಎಮ್ ನಾಯ್ಕ್ (92.90 %) ಅಂಕಗಳನ್ನು ಗಳಿಸಿ ಅತ್ಯುನ್ನತ ಸಾಧನೆಯನ್ನು ಮಾಡಿರುತ್ತಾರೆ.
ಭೌತಶಾಸ್ತ್ರದಲ್ಲಿ 7, ರಸಾಯನ ಶಾಸ್ತ್ರದಲ್ಲಿ 10, ಗಣಿತ ಶಾಸ್ತ್ರದಲ್ಲಿ 7 ವಿದ್ಯಾರ್ಥಿಗಳು 85 ಕ್ಕು ಅಧಿಕ % ಗಳನ್ನು ಗಳಿಸಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಯನ್ನು ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರಾದ ಡಾ. ಜಿ ಜಿ ಹೆಗಡೆ, ಆಡಳಿತ ಮಂಡಳಿಯ ಪದಾಧಿಕಾರಿಗಳು, ಕಾಲೇಜಿನ ಪ್ರಾಚಾರ್ಯರಾದ ಶ್ರೀ ಡಿ ಎನ್ ಭಟ್, ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ಎಲ್ಲಾ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿ ಇನ್ನೂ ಹೆಚ್ಚಿನ ಸಾಧನೆಗೆ ಶುಭ ಹಾರೈಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದೆ.