ಕುಮಟಾದ ಶ್ರೀ ಕ್ಷೇತ್ರ ಭುಜಗಪುರದಲ್ಲಿ ಜ.24 ರಿಂದ 28 ರವರೆಗೆ ಅಯುತ ಚಂಡಿಕಾ ಮಾಹಾಯಾಗ ಮತ್ತು ಮಹಾರುದ್ರಾನುಷ್ಠಾನ


ಕುಮಟಾ :- ತಾಲೂಕಿನ ಹೆಗಲೆಯ ಶ್ರೀ ಕ್ಷೇತ್ರ ಭುಜಗಪುರದ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ, ಭಾರತ ದೇಶದ ಇತಿಹಾಸದಲ್ಲೇ ಬೆರಳೆಣಿಕೆಯಷ್ಟು ಬಾರಿ ನಡೆದಿರುವ ಅಯುತ ಚಂಡಿಕಾ ಮಹಾಯಾಗ ಮತ್ತು ಮಹಾರುದ್ರಾನುಷ್ಠಾನ ಜ.24 ರಿಂದ 28 ರವರೆಗೆ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ವಿಶೇಷವಾಗಿ ಸಂತಾನ ಪ್ರಾಪ್ತಿ, ಆರೋಗ್ಯ ಭಾಗ್ಯ, ಸರ್ಪದೋಷ ನಿವಾರಣೆಗಾಗಿ ಹೆಗಲೆಯ ದುರ್ಗಾಪರಮೇಶ್ವರಿ ದೇವಾಲಯ ಪ್ರಸಿದ್ಧಿಯಾಗಿದೆ. ಇಂತಹ ದೇವಿಯ ಸನ್ನಿದಾನದಲ್ಲಿ ಅಯುತ ಚಂಡಿಕಾ ಮಹಾಯಾಗ ಮತ್ತು ಮಹಾರುದ್ರಾನುಷ್ಠಾನವನ್ನು ನೆರವೇರಿಸಲು ಜಗನ್ಮಾತೆಯ ಪ್ರೇರಣೆಯಂತೆ ಸಂಕಲ್ಪಿಸಲಾಗಿದೆ. ಇತಿಹಾಸದಲ್ಲೇ ಬೆರಳೆಣಿಕೆಯಷ್ಟು ಬಾರಿ ನಡೆದ ಮಹಾಯಾಗ ಇದಾಗಿದೆ. ರಾಮಚಂದ್ರಾಪುರದ ಶ್ರೀ ರಾಘವೇಶ್ವರ ಮಹಾಸ್ವಾಮಿಗಳ ದಿವ್ಯಾಶೀರ್ವಾದಗಳೊಂದಿಗೆ ಈ ಕಾರ್ಯಕ್ರಮ ಜರುಗಲಿದೆ. ಆದ ಕಾರಣ ಎಲ್ಲಾ ಭಕ್ತಾಧಿಗಳು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಆಯೋಜಕರಾದ ವಿನಾಯಕ ಹೆಗಡೆ ಮತ್ತು ಗುರುಪ್ರಕಾಶ ಹೆಗಡೆ ವಿನಂತಿಸಿದ್ದಾರೆ…


ಜ.24 ರಿಂದ 28 ರವರೆಗೆ ಕಾರ್ಯಕ್ರಮ ಜರುಗಲಿದ್ದು, ಜ.24 ರಂದು ಗುರುದೇವತಾ ಪ್ರಾರ್ಥನೆ, ಗಣೇಶ ಪೂಜಾ, ಪುಣ್ಯಾಹವಾಚನ, ದೇವನಾಂದಿ, ಮಹಾಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಅದೇ ರೀತಿ ಜ.25, 26,27,28 ರಂದು ವಿವಿಧ ರೀತಿಯ ಹೋಮ ಹವನಗಳು, ಧಾರ್ಮಿಕ ಕಾರ್ಯಗಳು, ಅನ್ನಸಂತರ್ಪಣೆ, ಮಹಾಪೂಜೆಗಳು ಜರುಗಲಿವೆ..

ಒಟ್ಟಿನಲ್ಲಿ 5 ದಿನಗಳ ಕಾಲ ನಡೆಯುವ ಅಪರೂಪದ ಈ ಮಹಾಯಾಗದಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡು, ದೇವಿಯ ಕೃಪೆಗೆ ಪಾತ್ರರಾಗುವುದರ ಜೊತೆ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಆಯೋಜಕರು ವಿನಂತಿಸಿದ್ದಾರೆ.