ಜನವರಿ :17 ರಂದು‌ ಕ.ವಿ.ವಿ ಅಂತರ್‌ ಕಾಲೇಜು ದೇಹದಾರ್ಡ್ಯ ಸ್ಪರ್ಧೆ ಹಾಗೂ ಕ.ವಿ.ವಿ ತಂಡದ ಆಯ್ಕೆ

ದಾಂಡೇಲಿ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ : 17.01.2024 ರಂದು ಕ.ವಿ.ವಿ ಅಂತರ್‌ಕಾಲೇಜು ದೇಹದಾರ್ಡ್ಯ ಸ್ಪರ್ಧೆಯನ್ನು ಸಂಘಟಿಸಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯರಾದ ಡಾ.ಎಂ.ಡಿ.ಒಕ್ಕುಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯ ಸಂಲಗ್ನ ಮಹಾವಿದ್ಯಾಲಯಗಳ ಪ್ರಾಂಶುಪಾಲರು ತಮ್ಮ ಮಹಾವಿದ್ಯಾಲಯದ ದೇಹದಾರ್ಡ್ಯ ಸ್ಪರ್ಧಾಳುಗಳನ್ನು ಅರ್ಹತಾ ಪತ್ರದೊಂದಿಗೆ ರೂ. 500/- ಗಳ ನೋಂದಣಿ ಶುಲ್ಕದೊಂದಿಗೆ ಜನವರಿ : 17 ರಂದು ಬೆಳಿಗ್ಗೆ 9 ಗಂಟೆಯ ಒಳಗಾಗಿ ಕಳುಹಿಸಿಕೊಡಲು ಸೂಚಿಸಲಾಗಿದೆ. ಈ ಸಂದರ್ಭದಲ್ಲಿ ರಾಷ್ಟಮಟ್ಟದ ಅಂತರ್ ವಿಶ್ವವಿದ್ಯಾಲಯ ಸ್ಪರ್ಧೆಗೆ ಕರ್ನಾಟಕ ವಿಶ್ವವಿದ್ಯಾಲಯ ತಂಡವನ್ನು ಆಯ್ಕೆಮಾಡಲಾಗುವುದು ಎಂದು ಡಾ.ಎಂ.ಡಿ.ಒಕ್ಕುಂದ ಅವರು ತಿಳಿಸಿದ್ದಾರೆ.