ದಾಂಡೇಲಿ : ನಗರದ ಟೌನ್ ಶಿಪ್ ನಿವಾಸಿ ಹಾಗೂ ಎಲ್ಲರ ಅಚ್ಚುಮೆಚ್ಚಿನ ಪ್ರೀತಿಯ ಡಾಲಿ ಎಂದೇ ಕರೆಸಿಕೊಳ್ಳುತ್ತಿದ್ದ ಅಬ್ದುಲ್ ಶೇಖ ಅವರು ಭಾನುವಾರ ವಿಧಿವಶರಾದರು. ಮೃತರಿಗೆ 47 ವರ್ಷ ವಯಸ್ಸಾಗಿತ್ತು.
ಚಾಲಕರಾಗಿ ಕೆಲಸವನ್ನು ನಿರ್ವಹಿಸುತ್ತಿದ್ದ ಅಬ್ದುಲ್ ಶೇಖ ಅವರು ದಾಂಡೇಲಿಯ ನಿಸರ್ಗ ಪ್ರವಾಸೋದ್ಯಮ ಸಂಸ್ಥೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಚಾಲಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದರು. ಕಳೆದ ಕೆಲ ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅಬ್ದುಲ್ ಶೇಖ ಅವರು ಭಾನುವಾರ ಮಧ್ಯಾಹ್ನ ವಿಧಿವಶರಾದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಸಂಖ್ಯೆಯಲ್ಲಿ ಬಂದು ಬಳಗವನ್ನು ಅಗಲಿದ್ದಾರೆ
ಮೃತರ ನಿಧನಕ್ಕೆ ಪ್ರವಾಸೋದ್ಯಮಿಗಳಾದ ಅನಿಲ್ ಪಾಟ್ನೇಕರ್, ಶಮಲ್ ಅಬ್ದುಲ್ಲ ಸೇರಿದಂತೆ ನಗರದ ಗಣ್ಯರನೇಕರು ಕಂಬನಿಯನ್ನು ಮಿಡಿದು ಸಂತಾಪವನ್ನು ಸೂಚಿಸಿದ್ದಾರೆ.