ನವದೆಹಲಿ: ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆಯಲಿರುವ ನೀತಿ ಆಯೋಗದ ಆಡಳಿತ ಮಂಡಳಿಯ ಏಳನೇ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಲಿದ್ದಾರೆ.
ಜುಲೈ 2019 ರ ನಂತರ ಮೊದಲ ಬಾರಿಗೆ ಆಡಳಿತ ಮಂಡಳಿಯ ವೈಯಕ್ತಿಕ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-ಶಾಲಾ ಶಿಕ್ಷಣದ ಅನುಷ್ಠಾನ, ರಾಷ್ಟ್ರೀಯ ಶಿಕ್ಷಣ ನೀತಿ-ಉನ್ನತ ಶಿಕ್ಷಣದ ಅನುಷ್ಠಾನ ಮತ್ತು ನಗರ ಆಡಳಿತದ ಬಗ್ಗೆ ಚರ್ಚೆ ನಡೆಯಲಿದೆ. ಅದಲ್ಲದೇ ಸಭೆಯಲ್ಲಿ ಬೆಳೆ ವೈವಿಧ್ಯೀಕರಣ, ಎಣ್ಣೆಕಾಳು, ದ್ವಿದಳ ಧಾನ್ಯ ಮತ್ತು ಕೃಷಿ ಸಮುದಾಯಗಳಲ್ಲಿ ಸ್ವಾವಲಂಬನೆ ಸಾಧನೆಯ ಬಗ್ಗೆ ಕೂಡ ಚರ್ಚಿಸಲಾಗುತ್ತದೆ.
ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಭಾರತವು ಮುಂದಿನ ವರ್ಷ G20 ಪ್ರೆಸಿಡೆನ್ಸಿ ಮತ್ತು ಶೃಂಗಸಭೆಯನ್ನು ಆಯೋಜಿಸುತ್ತಿದೆ. ಈ ಹಿನ್ನಲೆ ನೀತಿ ಆಯೋಗದ ಸಭೆಯು ಮಹತ್ವದ್ದಾಗಿದೆ.