ಕುಂಬಾರವಾಡದಲ್ಲಿ ಶ್ರದ್ಧಾಭಕ್ತಿಯಿಂದ ನಡೆದ ಶ್ರೀ.ಅಯ್ಯಪ್ಪ ಸ್ವಾಮಿಯ ಪೂಜೋತ್ಸವ

ಜೋಯಿಡಾ : ಶ್ರೀ.ಅಯ್ಯಪ್ಪ ಸೇವಾ ಸಮಿತಿ ಮತ್ತು ಸ್ಥಳೀಯ ಭಕ್ತಾಭಿಮಾನಿಗಳ ಸಹಕಾರದಡಿ ತಾಲೂಕಿನ‌ ಕುಂಬಾರವಾಡದಲ್ಲಿ ಶ್ರೀ.ಅಯ್ಯಪ್ಪ ಸ್ವಾಮಿಯ ಪೂಜೋತ್ಸವ ಕಾರ್ಯಕ್ರಮವು ಶ್ರದ್ಧಾ ಭಕ್ತಿಯಿಂದ ಶನಿವಾರ ಜರುಗಿತು.

ಬೆಳಿಗ್ಗೆ ಶ್ರೀ.ಅಯ್ಯಪ್ಪ ಸ್ವಾಮಿಯ ಜ್ಯೋತಿ ಮೆರವಣಿಗೆಯು ಕುಂಬಾರವಾಡದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಕೊನೆಯಲ್ಲಿ ಶ್ರೀ..ಸ್ವಾಮಿ ಸನ್ನಧಿಯಲ್ಲಿ ಸಂಪನ್ನಗೊಂಡಿತು. ಆನಂತರ ಶ್ರೀ.ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಮತ್ತು ಶ್ರೀ.ಅಯ್ಯಪ್ಪ ಸ್ವಾಮಿಯ ಜ್ಯೋತಿ ಪೂಜೆ ನೆರವೇರಿತು. ಮಹಾಪೂಜೆಯ ಬಳಿಕ ಸಾರ್ವಜನಿಕ ಅನ್ನಸಂಪರ್ಪಣೆಯನ್ನು ಏರ್ಪಡಿಸಲಾಗಿತ್ತು.

ಪೂಜಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಶ್ರೀ.ಅಯ್ಯಪ್ಪ ಸ್ವಾಮಿ ಭಕ್ತ ವೃಂದ ಹಾಗೂ ಸ್ಥಳೀಯ ಭಕ್ತಾಭಿಮಾನಿಗಳು ಶ್ರಮಿಸಿದ್ದರು.