ಕೋಲಾರ, ಡಿಸೆಂಬರ್ 27: ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಜಿಲ್ಲಾಮಟ್ಟದ ಪ್ರಗತಿ ಪರಿಶೀಲನೆ ಸಭೆ ಮಾಡಲಾಗಿದೆ. ಈ ವೇಳೆ ವಿದ್ಯಾರ್ಥಿಗಳಿಂದ ಶೌಚಾಲಯದ ಗುಂಡಿ ಸ್ವಚ್ಛಗೊಳಿಸಿದ ಪ್ರಕರಣಕ್ಕೆ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಪ್ರಸ್ತಾಪಿಸಿದ್ದಾರೆ. ಪ್ರಕರಣ ಸಂಬಂಧ ಮೂವರನ್ನು ಮಾತ್ರ ಜೈಲಿಗೆ ಕಳುಹಿಸಲಾಗಿದೆ. ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳನ್ನು ಏಕೆ ಬಂಧಿಸಿಲ್ಲ? ಇನ್ನು 2 ದಿನಗಳಲ್ಲಿ ಉಳಿದ ಇಬ್ಬರು ಆರೋಪಿಗಳನ್ನು ಬಂಧಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಇದೊಂದು ಕ್ರೂರ ಕೃತ್ಯ, ಇಂತಹದ್ದನ್ನು ನಾವು ಅಪ್ಪಿತಪ್ಪಿಯೂ ಸಹಿಸಲ್ಲ. ಯಾವುದೇ ಕಾರಣಕ್ಕೂ ಇಂತಹ ಘಟನೆ ಮರುಕಳಿಸಬಾರದು. ಎಲ್ಲಾ ವಸತಿ ಶಾಲೆಗಳಲ್ಲಿರುವ ಗೊಂದಲವನ್ನು ತಕ್ಷಣ ಬಗೆಹರಿಸಬೇಕು. ವಸತಿ ಶಾಲೆಗಳ ಒಳಗೆ ಪೋಷಕರು ಪ್ರವೇಶಿಸಲು ಅವಕಾಶ ನೀಡಬೇಕು. ಇದರಿಂದ ಪೋಷಕರಿಗೆ ವಸತಿ ಶಾಲೆಗಳ ಗುಣಮಟ್ಟ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಎಲ್ಲೂ ಮೇವಿಗೆ ತೊಂದರೆ ಇಲ್ಲ. ಕೆ.ಸಿ.ವ್ಯಾಲಿಯಿಂದ ಆಂತರ್ಜಲ ವೃದ್ಧಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮೇಲುಸ್ತುವಾರಿ ಮಾಡುವಂತೆ ಸೂಚನೆ ನೀಡಲಾಗಿದೆ. ಇನ್ನು ಮುಂದೆ 37 ಹೋಬಳಿಗಳಲ್ಲೂ ಮೊರಾರ್ಜಿ ದೇಸಾಯಿ ಶಾಲೆ ಮಾಡಲು ತಿಳಿಸಿದೆ ಎಂದಿದ್ದಾರೆ.
ಸರ್ಕಾರಿ ಜಾಗಗಳ ಒತ್ತುವರಿ ಗುರುತಿಸಿ ತೆರವಿಗೆ ಸೂಚನೆ
ಸರ್ಕಾರಿ ಜಾಗಗಳ ಒತ್ತುವರಿ ಗುರುತಿಸಿ ತೆರವಿಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಷ್ಟೇ ಪ್ರಭಾವಿಗಳಿದ್ರೂ ಮುಲಾಜಿಲ್ಲದೇ ಕ್ರಮಕ್ಕೆ ಸೂಚಿಸಲಾಗಿದೆ. ಒತ್ತುವರಿ ಜಾಗ ಗುರುತಿಸಿ ಆಸ್ಪತ್ರೆ, ಸ್ಮಶಾನಕ್ಕೆ ಜಾಗಬೇಕು ಹಾಗಾಗಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಅಧಿಕಾರಿಗಳು ಒಂದು ದಿನ ನಿಗದಿ ಮಾಡಿ ಜನರ ಕೆಲಸ ಮಾಡಿಕೊಡಬೇಕು
ರಾಜ್ಯದಲ್ಲಿ ಎಲ್ಲೂ ಮೇವಿಗೆ ತೊಂದರೆ ಇಲ್ಲ. ಕೋಲಾರದಲ್ಲೂ ಕುಡಿಯುವ ನೀರಿಗೆ ತೊಂದರೆಯಾಗಬಾರದು. ಕೆ.ಸಿ.ವ್ಯಾಲಿಯಿಂದ ಆಂತರ್ಜಲ ವೃದ್ಧಿಯಾಗಿದೆ. ಜಿಲ್ಲೆಯಲ್ಲಿ ಮೇವಿನ ಕೊರತೆಯಿಲ್ಲ, ಮೇವಿನ ಕಿಟ್ ಕೊಡಲಾಗಿದೆ. ನರೇಗಾದಲ್ಲಿ 150 ದಿನ ಕೆಲಸ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇವತ್ತಿನವರೆಗೂ ಅನುಮತಿ ಸಿಕ್ಕಿಲ್ಲ. ಜನರಿಗೆ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ. ಸಾಮಾನ್ಯ ಜನರ ಕೆಲಸ ಆಗುತ್ತಿಲ್ಲ. ಅದಕ್ಕೆ ಅಧಿಕಾರಿಗಳು ಒಂದು ದಿನ ನಿಗದಿ ಮಾಡಿ ಜನರ ಕೆಲಸ ಮಾಡಿಕೊಡಬೇಕು ಎಂದಿದ್ದಾರೆ.
ಬಾಕಿ ಇರುವ ರೆವಿನ್ಯೂ ಕೇಸುಗಳ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ರೈತರು ಕೇಸುಗಳಿಗೆ ಓಡಾಡಲು ತುಂಬಾ ಖರ್ಚು ಬರುತ್ತದೆ. ಹೆಚ್ಚಾಗಿ ಕಚೇರಿಗಳಿಗೆ ಅಲೆದಾಡಿಸಬೇಡಿ. ವಿಶೇಷ ಅಭಿಯಾನ ಮಾಡಿ ಬಾಕಿ ಪ್ರಕರಣಗಳನ್ನು ಇತ್ಯರ್ಥ ಮಾಡಿ ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ ಸೂಚನೆ ನೀಡಲಾಗಿದೆ. ಎಲ್ಲಾ ತಾಲ್ಲೂಗಳಲ್ಲಿ ಇರುವ ಸರ್ಕಾರಿ ಜಮೀನು ಮತ್ತು ಕೆರೆಗಳು ಹಾಗೂ ಸರ್ಕಾರಿ ಜಾಗಗಳ ಒತ್ತುವರಿ ತೆರವು ಮಾಡಿ.
ಸರ್ಕಾರಿ ಜಾಗಗಳ ಕುರಿತು ಸಮಗ್ರ ಮಾಹಿತಿ ನೀಡುವಂತೆ ಸೂಚನೆ. ಅಂಗನವಾಡಿ, ಸ್ಮಶಾನ ಮತ್ತು ಇತರೆ ಅಗತ್ಯಗಳಿಗೆ ಜಮೀನು ಮಂಜೂರು. ಶಾಲೆಗಳಲ್ಲಿ ಕೊಠಡಿಗಳ ಕೊರತೆ, ದುರಸ್ತಿ, ಶಾಲೆಗಳ ಸ್ಥಿತಿಗತಿ, ಶಿಕ್ಷಕರ ಕೊರತೆ ಮಾಹಿತಿ ಸಂಗ್ರಹಿಸಲಾಗಿದೆ. ಜಿಲ್ಲೆಯಲ್ಲಿ ಕೇವಲ 100 ಶಿಕ್ಷಕರ ಕೊರತೆ ಇದೆ ಎಂದು ಡಿಡಿಪಿಐ ಮಾಹಿತಿ ನೀಡಿದ್ದಾರೆ.