ದಾಂಡೇಲಿ : ವಿಶ್ವ ಹಿಂದೂ ಪರಿಷತ್ ಮಾರ್ಗದರ್ಶನದಲ್ಲಿ ನಗರದ ಬಜರಂಗದಳದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷ 10ನೇ ವರ್ಷದ ಹನುಮ ಮಾಲಾಧರಣೆಗೆ ನಗರದ ಜೆ.ಎನ್.ರಸ್ತೆಯಲ್ಲಿರುವ ಶ್ರೀ.ಮಾರುತಿ ಮಂದಿರದಲ್ಲಿ ಚಾಲನೆಯನ್ನು ನೀಡಲಾಯ್ತು.
ಬೆಳಿಗ್ಗೆಯಿಂದಲೇ ಶ್ರೀ.ಮಾರುತಿ ಮಂದಿರದಲ್ಲಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಾಲಾದೀಕ್ಷೆಯನ್ನು ಪಡೆದ ಬಳಿಕ ಇದೇ ಡಿಸೆಂಬರ್ : 24 ರಂದು ಅಂಜನಾದ್ರಿ ಬೆಟ್ಟದ ಕಿಸ್ಕಿಂದ ಹನುಮಾನ್ ಜನ್ಮಸ್ಥಳಕ್ಕೆ ಭೇಟಿ ಕೊಟ್ಟು ಅಲ್ಲಿ ಮಾಲೆಯನ್ನು ವಿಸರ್ಜನೆ ಮಾಡಲಾಗುತ್ತದೆ.
ನಗರದಲ್ಲಿ ಪ್ರಪ್ರಥಮವಾಗಿ ಕಳೆದ 9 ವರ್ಷಗಳ ಹಿಂದೆ ಹನುಮ ಮಾಲಾಧಾರಣೆ ಕಾರ್ಯಕ್ರಮಕ್ಕೆ ಬಜರಂಗದಳ ಚಾಲನೆ ನೀಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಹನುಮಾ ಮಾಲಾ ಧಾರಣೆಯ ಸಂದರ್ಭದಲ್ಲಿ ಬಜರಂಗದಳದ ಜಿಲ್ಲಾ ಸುರಕ್ಷಾ ಪ್ರಮುಖ ಚಂದ್ರು ಮಾಳಿ, ಸಂಚಾಲಕ ನಾಗರಾಜ ಅನಂತಪೂರ, ಲಿಂಗಾಯ್ಯ ಪೂಜಾರ, ವಿನಯ ದಳವಾಯಿ, ರಾಜೇಶ ಗಿರಿ, ಮಂಜು ಸಿಂದೆ, ಮಂಜು ರಾಮಸ್ವಾಮಿ ಹಾಗೂ ಬಜರಂಗ ದಳದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.