ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜಿನ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದುವರೆಗೆ ಮೂವರು ಆಟಗಾರ್ತಿಯರನ್ನು ಖರೀದಿಸಿದೆ. ಆಸ್ಟ್ರೇಲಿಯಾದ ಜಾರ್ಜಿಯಾ ವೇರ್ಹ್ಯಾಮ್ ಅವರನ್ನು 40 ಲಕ್ಷ ರೂ.ಗೆ ಖರೀದಿಸುವ ಮೂಲಕ ಬಿಡ್ಡಿಂಗ್ ಆರಂಭಿಸಿದ ಆರ್ಸಿಬಿ, ಆ ಬಳಿಕ ಇಂಗ್ಲೆಂಡ್ ತಂಡದ ಅನುಭವಿ ಆಟಗಾರ್ತಿ ಕೇಟ್ ಕ್ರಾಸ್ ಅವರನ್ನು 30 ಲಕ್ಷ ರೂ.ಗೆ ಖರೀದಿಸಿತು.
ಇದಾದ ಬಳಿಕ ಭಾರತೀಯ ಆಟಗಾರ್ತಿ ಏಕ್ತಾ ಬಿಷ್ತ್ ಅವರನ್ನು 60 ಲಕ್ಷ ರೂ.ಗೆ ಖರೀದಿಸುವಲ್ಲಿ ಆರ್ಸಿಬಿ ಯಶಸ್ವಿಯಾಗಿದೆ. ಇನ್ನು ಅನ್ಕ್ಯಾಪ್ಡ್ ಆಟಗಾರ್ತಿಯರ ಪಟ್ಟಿಯಿಂದ ಆರ್ಸಿಬಿ ಇದುವರೆಗೆ ಯಾವುದೇ ಪ್ಲೇಯರ್ ಅನ್ನು ಖರೀದಿಸಿಲ್ಲ.
ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಟ್ಟು 11 ಆಟಗಾರ್ತಿಯರನ್ನು ಉಳಿಸಿಕೊಂಡಿತ್ತು. ಇದೀಗ ಹರಾಜಿನ ಮೊದಲೆರಡು ಸುತ್ತಿನಲ್ಲೇ ಮೂವರು ಆಟಗಾರ್ತಿಯರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ.
RCB ಉಳಿಸಿಕೊಂಡಿರುವ ಆಟಗಾರ್ತಿಯರು: ಆಶಾ ಶೋಬನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ, ಸೋಫಿ ಡಿವೈನ್.
ವುಮೆನ್ಸ್ ಪ್ರೀಮಿಯರ್ ಲೀಗ್ ನಿಯಮದ ಪ್ರಕಾರ ಒಟ್ಟು ತಂಡದಲ್ಲಿ ಕನಿಷ್ಠ 15 ಆಟಗಾರ್ತಿಯರು ಇರಬೇಕು. ಅಲ್ಲದೆ ಒಂದು ತಂಡದ ಗರಿಷ್ಠ ಸಂಖ್ಯೆ 18. ಹೀಗಾಗಿ ಆರ್ಸಿಬಿ ತಂಡಕ್ಕೆ ಇನ್ನೂ ನಾಲ್ವರು ಆಟಗಾರ್ತಿಯರನ್ನು ಖರೀದಿಸುವ ಅವಕಾಶವಿದೆ.