ಯಲ್ಲಾಪುರದ ಅಡಕೆ ಭವನದಲ್ಲಿ 2ದಿನಗಳ ಜಿಲ್ಲಾಮಟ್ಟದ ಸಾಹಿತ್ಯ ಗಮಕ ಅಧಿವೇಶನ

ಯಲ್ಲಾಪುರದ ಅಡಕೆ ಭವನದಲ್ಲಿ ವಿವಿಧ ಸಂಘ ಸಂಸ್ಥಗಳು ಹಾಗೂ ಕರ್ನಾಟಕ ಗಮಕ ಕಲಾಪರಿಷತ್‌ ಆಶ್ರಯದಲ್ಲಿ 2 ದಿನಗಳ ಜಿಲ್ಲಾಮಟ್ಟದ ಸಾಹಿತ್ಯ ಗಮಕ ಅಧಿವೇಶನ ಕಾರ್ಯಕ್ರಮವನ್ನು ಖಾಸಗಿ ವಾಹಿನಿ ನಿರೂಪಕ ಅಜೀತ್‌ ಹನುಮಕ್ಕನವರ ಉದ್ಘಾಟಿಸಿದ್ರು..
ಯಲ್ಲಾಪುರದ ಅಡಕೆ ಭವನದಲ್ಲಿ ವಿವಿಧ ಸಂಘ ಸಂಸ್ಥಗಳು ಹಾಗೂ ಕರ್ನಾಟಕ ಗಮಕ ಕಲಾಪರಿಷತ್‌ ಆಶ್ರಯದಲ್ಲಿ 2 ದಿನಗಳ ಜಿಲ್ಲಾಮಟ್ಟದ ಸಾಹಿತ್ಯ ಗಮಕ ಅಧಿವೇಶನವನ್ನು ಪತ್ರಕರ್ತ ಅಜಿತ್ ಹನುಮಕ್ಕನವರ್ ಉದ್ಘಾಟಿಸಿದ್ರು..

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶವನ್ನು ಒಡೆಯುವ ಸಂಕಲ್ಪ ಹೊಂದಿರುವ ಏಜೆನ್ಸಿಗಳು ವ್ಯಾಪಕವಾಗಿ ತನ್ನ ಜಾಲವನ್ನು ಹಬ್ಬಿಸುತ್ತಿದ್ದು, ಇದನ್ನು ತಡೆಯುವ ಬಗ್ಗೆ ಜಾಗೃತಿ ಮತ್ತು ಸಂಘಟಿತ ಹೋರಾಟ ಅಗತ್ಯ. ದೇಶ ಒಡೆಯುವುದಕ್ಕಾಗಿ ಬೇರೆ ಬೇರೆ ಆಯಾಮಗಳಲ್ಲಿ ವ್ಯವಸ್ಥಿತ ಹೋರಾಟಗಳು ನಡೆಯುತ್ತಿವೆ. ಆದ್ರೆ ಐತಿಹಾಸಿಕ ಹಿನ್ನೆಲೆ, ಶ್ರೇಷ್ಠತೆ ಹೊಂದಿದ ಭಾರತವನ್ನು ಒಡೆಯುವುದು ಅಷ್ಟು ಸುಲಭವಲ್ಲ. ಈ ಜನಾಂಗ ಜವಾಬ್ದಾರಿ ಅರಿತು ನಡೆದರೆ ದೇಶದ ಭವ್ಯತೆ ಸುಭದ್ರವಾಗಿರಲು ಸಾಧ್ಯ ಎಂದು ಹೇಳಿದ್ರು…

ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ ಮಾತನಾಡಿ, ಭಾರತೀಯ ಪ್ರಾಚೀನ ಗ್ರಂಥ ಭಂಡಾರವನ್ನು ಸಂಪೂರ್ಣವಾಗಿ ಓದುವ, ಅರ್ಥೈಸುವ ಕಾರ್ಯ ಆಗಬೇಕಾಗಿದೆ. ನಮ್ಮತನದ ಮಹತ್ವವನ್ನು ನಾವು ಅರಿಯುವ ಈ ಕಾರ್ಯಕ್ಕೆ ಅಖಿಲ ಭಾರತ ಸಾಹಿತ್ಯ ಪರಿಷತ್ ವೇದಿಕೆಯಾಗಲಿ ಎಂದು ಹೇಳಿದ್ರು..

ಈ ವೇಳೆ ಗಮಕ ಕಲಾ ಪರಿಷತ್ ಗೌರವಾಧ್ಯಕ್ಷೆ ಗಂಗಮ್ಮಾ ಕೇಶವಮೂರ್ತಿ, ರಘುನಂದನ ಭಟ್ಟ ನರೂರು, ಕಾರ್ಯಕಾರಿ ಸದಸ್ಯ ಜಗದೀಶ ಭಂಡಾರಿ, ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷೆ ಮುಕ್ತಾ ಶಂಕರ, ಸೇರಿದಂತೆ ಇತರರು ಉಪಸ್ಥಿತರಿದ್ರು..