ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿ ಎಡವಟ್ಟು; ವಿದ್ಯಾರ್ಥಿ ಮೇಲೆ ರಾಡ್​ನಿಂದ ಹಲ್ಲೆ

ಬೆಂಗಳೂರು, ಡಿ.08: ಬೆಂಗಳೂರಿನ ಖಾಸಗಿ ಶಾಲೆ ಯೊಂದರಲ್ಲಿ ಶಿಕ್ಷಕಿಯೊಬ್ಬರು ಹೋಮ್ ವರ್ಕ್ ಮಾಡಿಲ್ಲ ಎಂದು ವಿದ್ಯಾರ್ಥಿ ಮೇಲೆ ಹಲ್ಲೆ ರಾಡ್‌ನಿಂದ ಹಲ್ಲೆ ಮಾಡಿದ ಅಮಾನವೀಯ ಘಟನೆ ನಡೆದಿದೆ. ವಿದ್ಯಾರ್ಥಿ ಅಸೈನ್ಮೆಂಟ್ ಕಂಪ್ಲೀಟ್ ಮಾಡಿಲ್ಲ ಎಂದು  ಏಳನೇ ತರಗತಿ ವಿದ್ಯಾರ್ಥಿಗೆ ರಕ್ತ ಬರುವಂತೆ ಹೊಡದಿದ್ದಾರೆ. ಕೈಗೆ ರಾಡ್​ನಲ್ಲಿ ಹೊಡೆದ ಪರಿಣಾಮ ಗಂಭೀರ ಗಾಯವಾಗಿದ್ದು, ವಿದ್ಯಾರ್ಥಿ ಕೈಗೆ ಆರು ಹೊಲಿಗೆ ಹಾಕಲಾಗಿದೆ.

ಪ್ರಕರಣ ಮುಚ್ಚಿಹಾಕಲು ಯತ್ನ ಆರೋಪ

ಇನ್ನು ಈ ಘಟನೆ ಮೂರು ದಿನಗಳ ಹಿಂದೆ ನಡೆದಿದ್ದು, ಶಾಲಾ ಆಡಳಿತ ಮಂಡಳಿಯಿಂದ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಆರೋಪ ಕೂಡ ಕೇಳಿಬಂದಿದೆ. ಸದ್ಯ ಹುಳಿಮಾವು ಸಾಯಿ ರಾಮ್ ಆಸ್ಪತ್ರೆಯಲ್ಲಿ ವಿದ್ಯಾರ್ಥಿ ಫರ್ದೀನ್​ಗೆ ಚಿಕಿತ್ಸೆ ನೀಡಲಾಗುತ್ತಿದೆ.

ಸೂಕ್ತ ಕ್ರಮದ ಭರವಸೆ

ಈ ಕುರಿತು ಮಾತನಾಡಿದ ಬಿಎಇ ಶಶಿಕಲಾ ಎಂಬುವವರು ‘ಲಾರ್ಡ್ಸ್ ಶಾಲೆಯ ಶಿಕ್ಷಕಿಯಿಂದ ಹಲ್ಲೆ ವಿಚಾರ ದೂರು ಬಂದಿದೆ. ಘಟನೆ ಮೂರು ದಿನಗಳ ಹಿಂದೆ ನಡೆದಿದ್ದು, ನಮಗೆ ನಿನ್ನೆ(ಡಿ. ಈ ಬಗ್ಗೆ ಮಾಹಿತಿ ಬಂದಿದೆ. ಈ ಹಿನ್ನಲೆ ಘಟನೆಯ ವಿಚಾರಣೆಗೆ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನ ಕಳುಹಿಸಿದ್ದೇವೆ. ಜೊತೆಗೆ ಶಾಲೆಗೆ ನೋಟಿಸ್ ಕೊಡುತ್ತಾ ಇದ್ದೀವಿ. ಕಂಪ್ಲೀಟ್ ವರದಿ ಪಡೆದು ಶಾಲೆಗೆ ನೋಟಿಸ್ ಕೊಟ್ಟು ಶಿಕ್ಷಕಿಯ ವಿಚಾರಣೆ ಮಾಡುತ್ತೇವೆ. ಶಾಲೆಯಿಂದ ಮಾಹಿತಿ ಬಂದ್ ಬಳಿಕ ಸೂಕ್ತ ಕ್ರಮವಹಿಸುವುದಾಗಿ ಹೇಳಿದರು.