ಗಡಿ ನಾಡು ಚಾಮರಾಜನಗರದಲ್ಲಿ ನಡೆದ ರಾಬರಿ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಈಗಾಗ್ಲೆ ಜಿಲ್ಲಾ ಪೊಲೀಸ್ ಪಡೆ 15 ಕ್ಕೂ ಹೆಚ್ಚು ಆರೋಪಿಗಳ ಕೈಗೆ ಕೋಳ ತೊಡಿಸಿದೆ. ಬಂಧಿತರ ಇನ್ಟ್ರಾಗೇಷನ್ ವೇಳೆ ಸ್ಪೋಟಕ ಮಾಹಿತಿ ರಿವೀಲ್ ಆಗಿದ್ದು, ಮತ್ತೊಂದು ಕಹಾನಿಯೇ ಈಗ ಆಚೆ ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ನಿಮ್ಮ ಮುಂದೆ. ಕಳೆದ ಎರೆಡು ತಿಂಗಳ ಹಿಂದೆ ಗಡಿ ನಾಡು ಚಾಮರಾಜನಗರ ಜಿಲ್ಲೆ ರಾಬರಿ ವಿಚಾರಕ್ಕೆ ಸಂಬಂದ ಪಟ್ಟಂತೆ ಸಾಕಷ್ಟು ಸುದ್ದಿಯಾಗಿತ್ತು. ಎರೆಡು ತಿಂಗಳ ಹಿಂದೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬ್ಯಾಕ್ ಟು ಬ್ಯಾಕ್ ಎರೆಡು ರಾಬ್ರಿ ಕೇಸ್ ರಿಜಿಸ್ಟರ್ ಆಗಿತ್ತು. ಆಗಿದ್ದ ಎರೆಡು ರಾಬ್ರಿ ಪ್ರಕರಣ ಕೂಡ ಕೇರಳದ ಕಡೆ ಮುಖ ಮಾಡಿ ತೋರಿಸಿತ್ತು. ಚಿನ್ನದ ವ್ಯಾಪಾರಿಗಳನ್ನೇ ಟಾರ್ಗೆಟ್ ಮಾಡಿದ್ದ ಗ್ಯಾಂಗ್ ಕೋಟಿ ಕೋಟಿ ಲೂಟಿ ಮಾಡಿ ತಲೆ ಮರೆಸಿ ಕೊಂಡಿತ್ತು. ರಾತ್ರಿ ವೇಳೆ ಚಿನ್ನವನ್ನ ಮಾರಾಟ ಮಾಡಿ ಬರುವ ವ್ಯಾಪಾರಿಗಳನ್ನೆ ಟಾರ್ಗೆಟ್ ಮಾಡ್ತಾಯಿದ್ದ ತಂಡ ಮಾರಕಾಸ್ತ್ರಗಳನ್ನ ತೋರಿಸಿ ಹಣ ಎಗರಿಸಿ ಜೂಟ್ ಆಗಿತ್ತು.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೇಗೂರು ಪೊಲೀಸರು 15ಕ್ಕೂ ಹೆಚ್ಚು ಆರೋಪಿಗಳ ಕೈಗೆ ಕೋಳ ತೊಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ರು, ಆದ್ರೆ ಈ ಪ್ರಕರಣವನ್ನ ಗಂಭೀರವಾಗಿ ತೆಗೆದು ಕೊಂಡ ಜಿಲ್ಲಾ ಪೊಲೀಸರು ಪ್ರಕರಣದ ಆಳಕ್ಕೆ ಇಳಿದಿದ್ದರು. ಯಾವಾಗ ಪೊಲೀಸರು ಪ್ರಕರಣವನ್ನ ಡಿಗ್ ಮಾಡ್ತಾ ಹೋದ್ರೊ ಆಗ ಅಸಲಿಯತ್ತು ಆಚೆ ಬಂತು ನೋಡಿ. ಅಸಲಿಗೆ ರಾಬರಿ ಮಾಡಿದವರು ಯಾರೊಬ್ಬರೂ ಪ್ರೊಫೆಶನಲ್ ರಾಬರ್ಸ್ ಅಲ್ಲ; ಬದಲಿಗೆ ಅವರೆಲ್ಲಾ ಒಂದು ದಿನಕ್ಕೆ 15 ಸಾವಿರ ಕೂಲಿ ಪಡೆದು ಬಂದು ಕೃತ್ಯ ಎಸಗಿದವರು ಎಂದು ಚಾಮರಾಜನಗರ ಎಸ್ ಪಿ ಪದ್ಮಿನಿ ಸಾಹು ಮಾಹಿತಿ ನೀಡಿದ್ದಾರೆ.
ಹೌದು ಇಷ್ಟು ದಿನ ಜನಸಾಮಾನ್ಯರು ಹಾಗೂ ಪೊಲೀಸರು ಅಂದುಕೊಂಡಂತೆ ರಾಬರಿ ಮಾಡಿ ಪೊಲೀಸರ ಕೈಯಲ್ಲಿ ಲಾಕ್ ಆದವರು ನಿಜವಾದ ರಾಬರ್ಸ್ ಅಲ್ವಂತೆ. ಅವರೆಲ್ಲಾ ಕಮಾಂಡಿಂಗ್ ಅಂದ್ರೆ 15 ಸಾವಿರ ಕೂಲಿ ಪಡೆದು ಕಾರಿನ ನಂಬರ್ ಹಾಗೂ ಬಣ್ಣವನ್ನ ತಿಳಿದು ದಾಳಿ ಮಾಡ್ತಾಯಿದ್ರು. ಕೈಗೆ ಸಿಕ್ಕ ಕೋಟಿ ಕೋಟಿ ಹಣವನ್ನ ಒಂದು ಸ್ಥಳಕ್ಕೆ ಹೋಗಿ ಇಟ್ಟು ಬರ್ತಾಯಿದ್ರು ಅಷ್ಟೇ. ಅಸಲಿಗೆ ಬಡ ಯುವಕರನ್ನೆ ಟಾರ್ಗೆಟ್ ಮಾಡ್ತಾಯಿದ್ದ ಆ ಕೇರಳ ಗ್ಯಾಂಗ್ ಒಂದು ದಿನಕ್ಕೆ 15 ಸಾವಿರ ಹಣ ನೀಡಿ ತಮ್ಮ ಕೆಲಸವನ್ನ ಮಾಡಿಸಿ ಕೊಳ್ತಾಯಿತ್ತು. ಸಪ್ತ ಸಾಗರದಾಚೆ ಕುಳಿತ ಆ ಅನಾಮಿಕ ಈ ಕೃತ್ಯವನ್ನ ಎಸಗುವಂತೆ ನೋಡಿಕೊಳ್ತಿದ್ದ. ಒಂದ್ವೇಳೆ ಖಾಕಿ ಕೈಯಲ್ಲಿ ಲಾಕ್ ಆದ್ರೆ ಆತನ ವಿಚಾರ ಎಲ್ಲಾ ಲೀಕ್ ಆಗದಂತೆ ಒಬ್ಬರಿಗೊಬ್ಬರು ಲಿಂಕ್ ಇಲ್ಲದಂತೆ ನೋಡಿ ಕೊಳ್ತಾನಂತೆ. ಅದೇ ರೀತಿ ಸುಂಕ ಕಟ್ಟದೆ ಬ್ಲಾಕ್ ಮಾರ್ಕೆಟ್ ನಲ್ಲಿ ಚಿನ್ನವನ್ನ ಮಾರಾಟ ಮಾಡಿ ಹಣ ತರುತ್ತಿದ್ದವರನ್ನೆ ಟಾರ್ಗೆಟ್ ಮಾಡಿ ಈ ರೀತಿಯ ಕೃತ್ಯ ಎಸಗಲಾಗಿದೆ.
ಇನ್ನು ಪೊಲೀಸರಿಗೆ ಕಗ್ಗಾಂಟಾಗಿರುವುದು ದರೋಡೆಗೆ ತುತ್ತಾದ ದೂರುದಾರರು. ಎಫ್ ಐ ಆರ್ ಆಗಿದ್ದರೂ ಕಂಪ್ಲನೆಂಟ್ ಗಳು ಮಾತ್ರ ಪೊಲೀಸರಿಗೆ ಇಲ್ಲಿಯವರೆಗೂ ಸರಿಯಾದ ಮಾಹಿತಿ ನೀಡ್ತಾಯಿಲ್ಲ. ಅಸಲಿಗೆ ಎಷ್ಟು ಹಣ ಹೋಗಿದೆ ಅನ್ನೋದನ್ನೆ ರಿವೀಲ್ ಮಾಡ್ತಾಯಿಲ್ಲ. ಎಲ್ಲಿ ಅಸಲಿಯತ್ತು ಬಯಲಾದ್ರೆ ತಮ್ಮ ಬುಡಕ್ಕೇ ಬರುತ್ತದೆಂದು ಆತಂಕಗೊಂಡಿದ್ದಾರೆ. ಇಂತಹದ್ದೇ ಲೂಪ್ ಹೋಲ್ ಹೊಂದಿರುವ ಚಿನ್ನದ ವ್ಯಾಪಾರಿಗಳು ರಾಬರ್ಸ್ ಗಳಿಗೆ ವರದಾನವಾಗಿ ಪರಿಣಮಿಸಿದ್ದಾರೆ. ಸುಂಕ ಪಾವತಿಸದೆ ಕಳ್ಳಾಟ ಆಡೋ ಚಿನ್ನದ ವ್ಯಾಪಾರಿಗಳು ಈಗ ಅಡಕತ್ತರಿಗೆ ಸಿಲುಕಿದ್ದಾರೆ!