ಚಿತ್ರದುರ್ಗ, (ಡಿಸೆಂಬರ್ 08): ಇಬ್ಬರು ಮಕ್ಕಳನ್ನು ಕೊಂದು ಬಳಿಕ ತಾಯಿ ಸಹ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಯಾದಲಘಟ್ಟ ಗ್ರಾಮದಲ್ಲಿ ನಡೆದಿದೆ. ತಾಯಿ ಲತಾ(25) ಮೊದಲು ನೀರಿನ ತೊಟ್ಟಿಯಲ್ಲಿ ಪುತ್ರಿ ಪ್ರಣೀತಾ, ಪುತ್ರ ಜ್ಞಾನೇಶ್ವರ್ನನ್ನು ಮುಳುಗಿಸಿ ಹತ್ಯೆ ಮಾಡಿದ್ದಾಳೆ. ಬಳಿಕ ಲತಾ ಮನೆಯಲ್ಲಿ ನೇಣುಗಿದುಕೊಮಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇನ್ನು ಇದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.