ಹದಿನೈದು ದಿನಗಳಿಂದ ಅಲೆದ್ರೂ ಸಿಗಲಿಲ್ಲ ರೇಷನ್ ಕಾರ್ಡ್: ಜಿಲ್ಲಾಡಳಿತ ವಿರುದ್ಧ ಮಹಿಳೆಯರು ಆಕ್ರೋಶ

ಗದಗ, ಡಿಸೆಂಬರ್​​​ 06: ಸರ್ಕಾರದ ಯಾವುದೇ ಯೋಜನೆ ಲಾಭ ಪಡೆಯಬೇಕಾದರೆ ರೇಷನ್ ಕಾರ್ಡ್ ಬೇಕೇ ಬೇಕು. ಆದರೆ ಆ ಜಿಲ್ಲೆಯಲ್ಲಿ ರೇಷನ್ ಕಾರ್ಡ್  ಪಡೆಯಲು ಪರದಾಡುತ್ತಿದ್ದಾರೆ. ಸರ್ಕಾರದ ಗ್ಯಾರಂಟಿಗಳು ಸಿಗದೇ ಒದ್ದಾಡುತ್ತಿದ್ದಾರೆ. ಕರ್ನಾಟಕ ಒನ್ ಕೇಂದ್ರಕ್ಕೆ‌ ನಸುಕಿನಲ್ಲೇ ನೂರಾರು‌ ಮಹಿಳೆಯರು ಮುಗಿಬಿದ್ದಿದ್ದಾರೆ. ಪುಟ್ಟ ಪುಟ್ಟ ಮಕ್ಕಳ ಸಮೇತ ಚಳಿಯಲ್ಲಿ ತಾಯಿಂದರು ಸರತಿ ಸಾಲಿನಲ್ಲಿ ನಿಂತಿರೋ ದೃಶ್ಯಗಳು ಮನಕಲುಕುವಂತಿವೆ. ಆದರೆ ಸರ್ವರ್ ಡೌನ್ ಆಗ್ತಾಯಿರೋದ್ರಿಂದ 15 ದಿನಗಳಿಂದ ಬಡ ಜನರು ದುಡಿಯೋದನ್ನು ಬಿಟ್ಟು ರೇಷನ್ ಕಾರ್ಡ್​ಗಾಗಿ ಪರದಾಡುತ್ತಿದ್ದಾರೆ. ಜಿಲ್ಲಾಡಳಿತ ಮಾತ್ರ ಬಡವರ ಗೋಳು ಕೇಳ್ತಾಯಿಲ್ಲ. ಇದು ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ.

ಬಡ ಕುಟುಂಬಗಳಿಗೆ ರೇಷನ್ ಕಾರ್ಡ್ ಇಲ್ಲ

ಗದಗ ನಗರದ ಎಸಿ ಕಚೇರಿ ಆವರಣದಲ್ಲಿ ರೇಷನ್ ಕಾರ್ಡ್​ಗಾಗಿ ಸಾಕಷ್ಟು ಜನರು ನಸುಕಿನಲ್ಲೇ ಬಂದು ಕಾಯುತ್ತಾ ಕುಳಿತುಕೊಳ್ಳುತ್ತಾರೆ. ಇಷ್ಟೇಲ್ಲಾ ರಾದ್ಧಾಂತ ಆಗುತ್ತಿದ್ದರು ಜಿಲ್ಲಾಡಳಿತ ಮಾತ್ರ ಮೌನಕ್ಕೆ ಶರಣಾಗಿದೆ. ಅದೆಷ್ಟೋ ಬಡ ಕುಟುಂಬಗಳು ರೇಷನ್ ಕಾರ್ಡ್ ಇಲ್ದೇ ಪರದಾಡುತ್ತಿವೆ. ಹೀಗಾಗಿ ಕೆಲವರು ಹೊಸ ಹೆಸರು ಸೇರ್ಪಡೆ, ತಿದ್ದುಪಡಿ ಅಷ್ಟೇ ಅಲ್ಲ ಗ್ಯಾರಂಟಿ ಯೋಜನೆ ಲಾಭಕ್ಕೆ ಮಹಿಳೆರಯದ್ದೇ ಮೊದ ಹೆಸರು ಇರಬೇಕು ಎನ್ನುವ ನಿಯಮ ಇದೆ. ಹೀಗಾಗಿ ಬಡ ಕಟುಂಬಗಳು ತಿದ್ದುಪಡಿ, ಹೆಸರು ಸೇರ್ಪಡೆ, ಹೊಸ ಕಾರ್ಡ್ ಮಾಡಿಸಲು ಕರ್ನಾಟಕ ಒನ್ ಕೇಂದ್ರಕ್ಕೆ ಲಗ್ಗೆ ಇಟ್ಟಿದ್ದಾರೆ.

15 ದಿನಗಳಿಂದ ಅಲೆದಾಡಿದರೂ ರೇಷನ್ ಕಾರ್ಡ್ ಮಾತ್ರ ಆಗ್ತಾಯಿಲ್ಲ. ಕಾರಣ ಬರೀ ಸರ್ವರ್ ಡೌನ್,​ ಸರ್ವರ್ ಡೌನ್​​ ಎಂಬ ಉತ್ತರ. ಹೀಗಾಗಿ ಬಡ ಮಹಿಳೆಯರು ಈ ಹದಗೆಟ್ಟ ವವ್ಯಸ್ಥೆಗೆ ಕಾದು ಕೆಂಡವಾಗಿದ್ದಾರೆ. ನಿತ್ಯ ದುಡಿದ್ರೇ ನಮ್ಮ ಜೀವನ ಸರ್. ಇಲ್ಲಾಂದ್ರೆ ಉಪವಾಸ ಅನ್ನೋ ಸ್ಥಿತಿ ಇದೆ. ಹೀಗಾಗಿ 15 ದಿನಗಳಿಂದ ಹೀಗೆ ಅಲೆದಾಡಿಸಿದ್ರೆ ಬಡ ಜನರು ಏನ್ ಮಾಡಬೇಕು ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿತ್ಯ ಹೀಗಾದ್ರೆ ನಾವು ಎಲ್ಲಿ ಹೋಗಿ ನೇಣು ಹಾಕೋಬೇಕಾ ಅಂತ ಮಹಿಳೆ ಆಡಳಿತ ವ್ಯವಸ್ಥೆ ವಿರುದ್ಧ ಬಡ ಮಹಿಳೆ ಸೂಸವ್ವ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಸಾವಿರಾರು ಕುಟುಂಬಗಳಿಗೆ ಈ ರೇಷನ್ ಕಾರ್ಡ್ ಇಲ್ಲ. ಕಾರಣ ಸರ್ಕಾರದ ಗ್ಯಾರಂಟಿಗಳ ಲಾಭವೇ ನಮಗೆ ಸಿಗ್ತಿಲ್ಲ ಅಂತ ಮಹಿಳೆಯರು ಕಿಡಿಕಾರಿದ್ದಾರೆ. ಗೃಹಲಕ್ಷ್ಮೀ, ಉಚಿತ ವಿದ್ಯುತ್, ಅನ್ನಭಾಗ್ಯ, ಮಕ್ಕಳಿಗೆ ವಿದ್ಯಾರ್ಥಿ ವೇತನ ಸೇರಿ ಯಾವುದೇ ಸೌಲಭ್ಯ ಸಿಕ್ತಿಲ್ಲ ಅಂತ ಮಹಿಳೆಯರು ಆರೋಪಿಸಿದ್ದಾರೆ.

ರೇಷನ್ ಕಾರ್ಡ್ ಮಾಡಿಸಲು ಮಹಿಳೆಯರು ಹಸುಗೂಸುಗಳೊಂದಿಗೆ ನಸುಕಿನಲ್ಲೇ ಕರ್ನಾಟಕ ಒನ್ ಕೇಂದ್ರಕ್ಕೆ ಲಗ್ಗೆ ಇಟ್ಟಿದ್ದಾರೆ. ಚುಮ್ ಚುಮ್ ಚಳಿಯಲ್ಲೇ ಮಕ್ಕಳ, ಮಹಿಳೆಯರ ಪಾಡು ದೇವರಿಗೆ ಪ್ರೀತಿ ಎಂಬಂತಾಗಿದೆ. ಇಡೀ ದಿನ ಕಾದ್ರೂ ರೇಷನ್ ಕಾರ್ಡ್ ಆಗ್ತಾಯಿಲ್ಲ. ನಸಕಿನ 4-5 ಗಂಟೆಗೆ ಬಂದು ಕ್ಯೂನಲ್ಲಿ ನಿಂತ್ರೂ ರೇಷನ್ ಕಾರ್ಡ್ ಸಿಗದೇ ಅಲೆದಾಡುತ್ತಿದ್ದಾರೆ. ಗ್ಯಾರಂಟಿ ಲಾಭ ಪಡೆಯಲು ಹೊಸ ರೇಷನ್ ಕಾರ್ಡ್, ರೇಷನ್ ಕಾರ್ಡ್ ನಲ್ಲಿ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗಾಗಿ ಬಡ ಮಹಿಳೆಯರ ಹರಸಹಾಸ ಪಡಬೇಕಾಗಿದೆ ಅಂತ ಕೃಷ್ಣವೇಣಿ ಗೋಳು ತೋಡಿಸಿಕೊಂಡಿದ್ದಾರೆ.

ಕಳೆದ ಹದಿನೈದು ದಿನಗಳಿಂದ ಅಲೆದಾಡಿದ್ರೂ ಜಿಲ್ಲಾಡಳಿತ ಡೋಂಟ್ ಕೇರ್ ಅಂತಿದೆ. ಸರ್ವರ್ ಸಮಸ್ಯೆ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರ ಬಡ ಕುಟುಂಬಗಳ ಬದುಕಿನ ಜೊತೆ ಚೆಲ್ಲಾಟ ಆಡ್ತಾಯಿದೆ ಅಂತ ಆಕ್ರೋಶ ಹೊರಹಾಕಿದ್ದಾರೆ. ಬಡ ಕುಟುಂಬಗಳು ಇಷ್ಟೇಲ್ಲಾ ಸಮಸ್ಯೆ ಅನುಭವಿಸುತ್ತಿದ್ರೂ ಗದಗ ಜಿಲ್ಲೆ ಜನಪ್ರತಿನಿಧಿಗಳು ಜಿಲ್ಲಾಡಳಿತದ ಯಾವೊಬ್ಬ ಅಧಿಕಾರಿಗಳು ಕ್ಯಾರೇ ಅಂತಿಲ್ಲ.