ಮೇಲಕು ಕೃತಿ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ: ಡಿಸೆಂಬರ 24ರಂದು ಕೃತಿ ಬಿಡುಗಡೆ.

ಅಂಕೋಲಾ. ಜಿಲ್ಲೆ ಕಂಡ ಅತ್ಯುತ್ತಮ ಬರಹಗಾರರು, ನಿವೃತ್ತ ಪ್ರಾಚಾರ್ಯರು ಆಗಿರುವ ನಮ್ಮೂರಿನ ಹೆಮ್ಮೆಯ ಬೀರಣ್ಣ ನಾಯಕ ಮೊಗಟಾ ರವರು ಬರೆದಿರುವ ಮೆಲಕು ಕೃತಿ ದಿನಾಂಕ 24 ಡಿಸೆಂಬರ್ ದಂದು ಲೋಕಾರ್ಪಣೆಗೊಳ್ಳುತ್ತಿದ್ದು ಇದು ನಮ್ಮೂರಿಗೆ ಹೆಮ್ಮೆ ಎಂದು ಜಿಪಂ ಮಾಜಿ ಸದಸ್ಯ ಜಗದೀಶ ನಾಯಕ ಮೊಗಟಾ ಹೇಳಿದರು
ತಾಲೂಕಿನ ಮೊಗಟಾ ಮೊರಳ್ಳಿಯ ಶಿವಪ್ರದಾ ಮನೆಯಂಗಳದಲ್ಲಿ ಮೆಲಕು ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ ಈ ಕಾರ್ಯಕ್ರಮಕ್ಕೆ ನಮ್ಮೂರಿಗೆ ಆಗಮಿಸುತ್ತಿರುವ ಸರ್ವರನ್ನು ಆತ್ಮೀಯವಾಗಿ ಸ್ವಾಗತಿಸುತ್ತೇವೆ ಎಂದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿ ಮೊಗಟಾ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಂದೀಪ್ ನಾಯಕ ಮಾತನಾಡಿ ಇಂತಹ ಕೃತಿಗಳು ಹಳೆಯ ನೆನಪುಗಳನ್ನು ಮೆಲಕು ಹಾಕುವ ರೀತಿಯಲ್ಲಿ ಮೂಡಿ ಬಂದಿರಬೇಕು. ಹಳೆಯ ನೆನಪು ನಮಗೆ ನೆಮ್ಮದಿ ನೀಡುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಪ್ರದಾ ಪ್ರಕಾಶನ ಸೇವಾ ಸಂಸ್ಥೆಯ ಅಧ್ಯಕ್ಷೆ ನವ್ಯಾ ಶಿವದೇವ ಮೊಗಟಾ ಮಾತನಾಡಿ ನಮಗೆ ಈ ಕೃತಿ ಲೋಕಾರ್ಪಣೆ ಅತ್ಯಂತ ಮಹತ್ವದ ದಿನ. ಈ ಕೃತಿ ಲೋಕಾರ್ಪಣೆ ಗೊಳಿಸಲು ಜಾನಪದ ವಿದ್ವಾಂಸರಾದ ಎನ್ ಆರ್ ನಾಯಕ ಆಗಮಿಸುತ್ತಿದ್ದು ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಸುಮನಾ ನಾಯಕ ವಹಿಸಲಿದ್ದಾರೆ. ಶಿವಪ್ರದಾ ಪ್ರಕಾಶನ ಮತ್ತು ಸೇವಾ ಸಂಸ್ಥೆಯನ್ನು ಸಾಹಿತಿ ಡಾ ಆರ್ ಜಿ ಗುಂದಿ ಉದ್ಘಾಟಿಸಲಿದ್ದಾರೆ. ಕೃತಿಯ ಪರಿಚಯವನ್ನು ಸಾಹಿತಿ ಡಾ ಶ್ರೀಪಾದ ಶೆಟ್ಟಿ ಮಾಡಿಕೊಡಲಿದ್ದು ಅತಿಥಿಗಳಾಗಿ ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಕರಾವಳಿ ಮುಂಜಾವು ದಿನಪತ್ರಿಕೆಯ ಸಂಪಾದಕ ಗಂಗಾಧರ ಹಿರೇಗುತ್ತಿ, ಜಿಲ್ಲಾ ಕ ಸಾ ಪ ಅಧ್ಯಕ್ಷ ಬಿ ಎನ್ ವಾಸರೆ, ತಾಲೂಕಾ ಸಾಹಿತ್ಯ ಪರಿಷತ್ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಯಲ್ಲಾಪುರ ತಾಲೂಕಾ ಕ ಸಾ ಪ ಅಧ್ಯಕ್ಷ ವಿದ್ವಾನ್ ಸುಬ್ರಮಣ್ಯ ಭಟ್ ಆಗಮಿಸುತ್ತಿದ್ದು ಈ ಕಾರ್ಯಕ್ರಮ ದಲ್ಲಿ ಎಲ್ಲಾ ಸಾಹಿತ್ಯಾಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಗೊಳಿಸಿ ಎಂದರು.
ಗ್ರಾಪಂ ಅಧ್ಯಕ್ಷೆ ಸುಮನಾ ನಾಯಕ ಅಧ್ಯಕ್ಷತೆ ವಹಿಸಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.ವೇದಿಕೆಯಲ್ಲಿ ನಿವೃತ್ತ ಪ್ರಾಚಾರ್ಯ ಬೀರಣ್ಣ ನಾಯಕ ಮೊಗಟಾ, ಇಂದಿರಾ ನಾಯಕ, ಇದ್ದರು. ಪತ್ರಕರ್ತ ಸುಭಾಷ್ ಕಾರೇಬೈಲ್ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿ ವಂದಿಸಿದರು. ಮಂಜುನಾಥ್ ನಾಯ್ಕ್, ದೇವಣ್ಣ ನಾಯಕ ಸಹಕರಿಸಿದರು.
ತನ್ನ 8ನೆ ತರಗತಿಯಿಂದಲೇ ಬರಹಗಾರರಾಗಿ ಗುರುತಿಸಿಕೊಂಡಿರುವ ಬೀರಣ್ಣ ನಾಯಕ ಮೊಗಟಾ ಪ್ರಾಚಾರ್ಯರಾಗಿ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರ ಜೊತೆ ಪತ್ರಿಕೆಯಲ್ಲಿ ಮರೆತು ಹೋಗುತ್ತಿರುವ ಹಳೆಯ ನೆನಪನ್ನು ಮೆಲಕು ಹಾಕಿಸುತ್ತಿದ್ದು ಈ ಮೆಲಕು ಕೃತಿ ಹಳೆಯ ನೆನಪಿನ ದರ್ಪಣವಾಗಲಿದೆ ಎನ್ನುವುದು ಸಾಹಿತಿಗಳ ಮಾತಾಗಿದೆ